ಗುಟ್ಕಾ ನಿಷೇಧ ಏಕಮುಖ ನಿರ್ಧಾರ
ಕ.ಪ್ರ.ವಾರ್ತೆ ಕೊಪ್ಪ ಜೂ.5:
ರಾಜ್ಯ ಸರ್ಕಾರ ಅಡಕೆ ಬೆಳೆಗಾರರ, ರೈತ ಮುಖಂಡರ ಹಾಗೂ ಆ ಭಾಗದ ಶಾಸಕರೊಂದಿಗೆ ಪರಾಮರ್ಶೆ ಮಾಡದೇ ಗುಟ್ಕಾ ನಿಷೇಧದ ಮೂಲಕ ಏಕಮುಖ ನಿರ್ಧಾರವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೈಗೊಂಡು ಅಡಕೆ ಬೆಳೆಗಾರನ್ನು ಸಂಕಷ್ಟಕ್ಕೆ ಸಿಲುಕಿಸಿ ಬೀದಿ ಪಾಲು ಮಾಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಪುಣ್ಯಪಾಲ್ ಆರೋಪಿಸಿದರು.
ಬುಧವಾರ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ತಾಲೂಕು ಬಿಜೆಪಿಯಿಂದ ಪಟ್ಟಣದ ಬಸ್ ಸ್ಟಾಂಡ್ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಈ ನಿರ್ಧಾರದಿಂದ ರಾಜ್ಯದ 16 ಜಿಲ್ಲೆಯ ಅಡಕೆ ಬೆಳೆಗಾರರು ಮಾತ್ರವಲ್ಲದೆ ಅದನ್ನು ಅವಲಂಬಿಸಿರುವ ಲಕ್ಷಾಂತರ ಕೂಲಿ ಕಾರ್ಮಿಕರು ಬೀದಿಗೆ ಬರುತ್ತಾರೆ ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದೇ ಗುಟ್ಕಾದ ಜೊತೆಗೆ ಪಾನ್ ಮಸಾಲ, ಸುಪಾರಿಯನ್ನೂ ಬ್ಯಾನ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವಂದ್ವ ನಿರ್ಧಾರ: ಅದರೆ ಮನುಷ್ಯನ ದೇಹಕ್ಕೆ ಹಾನಿಕಾರಕವಾದ ತಂಬಾಕು ಉತ್ಪನ್ನಗಳಾದ ಮಧು, ಹನ್ಸ್, ಸಿಗರೇಟುಗಳನ್ನು ಏಕೆ ನಿಷೇಧಿಸಿಲ್ಲ ಎಂಬ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ದ್ವಂದ್ವ ನಿರ್ಧಾರಗಳು ಐಟಿಸಿ ಲಾಬಿ ನಡೆಸಿವೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ ಎಂದು ತಿಳಿಯುತ್ತದೆ ಎಂದರು.
ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಹಿಂದೆ ರಾಜ್ಯದ ಉಚ್ಚ ನ್ಯಾಯಲಯ ಹಳದಿ ಅಡಕೆ ಬೆಳೆಗಾರ ಪರವಾಗಿ ನೀಡಿದ ಗೋರಕ್ ಸಿಂಗ್ ವರದಿ ಅಧಾರಿತ 1,400 ಸಾವಿರ ಕೋಟಿ ರೈತರ ಸಾಲ ಮನ್ನಾವನ್ನು 90 ದಿನಗಳಲ್ಲಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಲಯ ಆದೇಶ ನೀಡಿದ ಸಂದರ್ಭದಲ್ಲಿ ಯಾಕೆ ಜಾರಿಗೆ ತರಲಿಲ್ಲ ಎಂಬುದಕ್ಕೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕಾಗುತ್ತದೆ ಎಂದರು.
ಪಕ್ಷಾತೀತ ಹೋರಾಟ: ಇಲ್ಲಿನ ರೈತ ಸಂಘಟನೆ ಮುಖಂಡರುಗಳು ಇನ್ನಾದರೂ ಪಕ್ಷತೀತಾವಾಗಿ ರೈತ ಪರವಾದ ಹೋರಟಗಳೊಂದಿಗೆ ಕೈಜೋಡಿಸಿ, ಅಡಕೆ ಬೆಳೆಗಾರಿಗೆ ನ್ಯಾಯ ದೊರಕಿಸಿಕೊಡುವತ್ತ ಹೋರಟ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ ಮಾತನಾಡಿ, ದೇಶದ 6 ರಾಜ್ಯದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ನಿಷೇಧ ಮಾಡಿದೆಯೇ ಹೊರತು ಅಡಕೆ ಉತ್ಪನ್ನಗಳಾದ ಪಾನ್ ಮಸಾಲ, ಅಡಕೆ ಸುಫಾರಿಗಳನ್ನು ಮಾಡಿಲ್ಲ ಅದರೆ ಕರ್ನಾಟಕದಲ್ಲಿ ಗುಟ್ಕಾ ಜೊತೆಗೆ ಹಾನಿಕಾರಕವಲ್ಲದ ಪಾನ್ ಮಸಾಲ, ಅಡಕೆ ಸುಫಾರಿಗಳನ್ನು ನಿಷೇಧಿಸಿರುವುದು ಕಾಂಗ್ರೇಸ್ ನಾಯಕರ ಜ್ಞಾನಮಟ್ಟ ತೋರಿಸುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ರೈತರನ್ನು ಸಂಕಷ್ಟದ ಕೂಪಕ್ಕೆ ತಳ್ಳುವಂತಹ ಕೆಲಸಕ್ಕೆ ಕೈಹಾಕಿದ್ದಾರೆ. ಕೃಷಿ ಉದ್ದೇಶಕ್ಕಾಗಿ ಹಲವು ವರ್ಷದಿಂದ ಭೂಮಿಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡೊಕಂಡು ಬಂದಂತಹ ಭೂಮಿಯನ್ನು ಖುಲ್ಲಾ ಮಾಡಲು ರಾಜ್ಯ ಸರ್ಕಾರ ಆದೇಶ ನೀಡುವ ಮೂಲಕ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರದ ಈ ರೈತ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯ ನಂತರ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಪಂ ಸದಸ್ಯ ಕುಕ್ಕಡಿಗೆ ರವೀಂದ್ರ, ಸುಚಿತಾ ನರೇಂದ್ರ, ಅನ್ನಪೂರ್ಣ ಚನ್ನಕೇಶವ, ತಾಪಂ ಸದಸ್ಯ ಬಿ.ಆರ್. ನಾರಯಾಣ್,ಪೂರ್ಣಚಂದ್ರ, ಬೆಳಗೊಳ ರಮೇಶ್, ಎಚ್.ಡಿ. ಜಯಂತ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

