ಗೋರಕ್ಸಿಂಗ್ ವರದಿ ಜಾರಿಗೊಳಿಸಿ
ಕ.ಪ್ರ.ವಾರ್ತೆ, ಶೃಂಗೇರಿ, ಜೂ.6
ಗುಟ್ಕಾ ನಿಷೇಧ ರಾಜ್ಯ ಸರ್ಕಾರದ ಏಕಪ್ಷೀಯ ನಿರ್ಧಾರವಾಗಿದ್ದು, ರೈತ ವಿರೋಧಿ ನೀತಿಯಾಗಿದೆ. ಸರ್ಕಾರ ಕೂಡಲೇ ಗುಟ್ಕಾ ನಿಷೇಧ ಹಿಂಪಡೆದು ಗೋರಖ್ ಸಿಂಗ್ ವರದಿ ಅನುಷ್ಠಾನಗೊಳಿಸಲಿ ಎಂದು ತಾ. ಬಿಜೆಪಿ ಅಧ್ಯಕ್ಷ ಎ.ಎಸ್. ನಯನ ಆಗ್ರಹಿಸಿದರು.
ಗುಟ್ಕಾ ಮಾತ್ರ ನಿಷೇಧ: ಪಟ್ಟಣದ ಸಂತೆಮಾರುಕಟ್ಟೆ ಬಳಿ ತಾಲೂಕು ಬಿಜೆಪಿ ಆಯೋಜಿಸಿದ್ದ ಗುಟ್ಕಾ ನಿಷೇಧ, ಒತ್ತುವರಿ ಖಲ್ಲಾ ಸೇರಿದಂತೆ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸರ್ಕಾರ ಬಿಡಿ, ಸಿಗರೇಟು, ಮದ್ಯ, ಪಾನ್ ಮಸಾಲ ಸೇರಿದಂತೆ ಎಲ್ಲಾ ಹಾನಿಕಾರಕ ಪದಾರ್ಥಗಳನ್ನು ನಿಷೇಧಿಸಲಿ.
ಆಗ ಗುಟ್ಕಾ ನಿಷೇಧ ಸ್ವಾಗತಿಸುತ್ತೇವೆ. ಆದರೆ ಅವು ಬಿಟ್ಟು ಏಕಾಏಕಿ ಗುಟ್ಕಾ ಮಾತ್ರ ನಿಷೇಧ ಮಾಡಿರುವುದು ರಾಜಕೀಯ ದುರುದ್ದೇಶವಾಗಿದೆ ಎಂದು ಆರೋಪಿಸಿದರು.
ಗೋರಖ್ ಸಿಂಗ್ ವರದಿ: ಗೋರಖ್ ಸಿಂಗ್ ವರದಿಯಂತೆ ಅಡಕೆ ಬೆಳೆಗಾರರ 1,400 ಕೋಟಿ ಸಾಲ ಮನ್ನಾ ಮಾಡುವ ಭರವಸೆ ನೀಡಿ ವಂಚಿಸಿರುವ ಕೇಂದ್ರ ಸರ್ಕಾರ ಗುಟ್ಕಾ ನಿಷೇಧದ ಮೂಲಕ ಅಡಕೆ ಬೆಳೆಗಾರರ ಬದುಕನ್ನೇ ನಾಶ ಮಾಡಲು ಹೊರಟಿದೆ. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಕೂಡಲೇ ಗೋರಖ್ ಸಿಂಗ್ ವರದಿ ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು. ಅಡಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಬಸ್ಸು ನಿಲ್ದಾಣದಿಂದ ರಾಜ್ಯ ರ್ಸಾರದ ವಿರುದ್ಧ ಘೋಷಣೆ ಕೂಗುತ್ತಾ ಹೊರಟ ಪ್ರತಿಭಟನಾ ಮರೆವಣಿಗೆ ಸಂತೆಮಾರುಕಟ್ಟೆ ಬಳಿ ಸಮಾವೇಶಗೊಂಡಿತು. ಕೃಷ್ಣಮೂರ್ತಿ ಹೆಗ್ಡೆ, ಅರುಣ ಕುಮಾರ್, ಪರಾಶರ, ಮಂಜುನಾಥ್ ಪಂಡಿತ್ ಸೇರಿಂದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

