ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ
ಕ.ಪ್ರ.ವಾರ್ತೆ, ಕಡೂರು, ಜೂ.7 ಸರ್ಕಾರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದು, ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಮಾತ್ರ ಸ್ವಾವಲಂಬಿಯಾಗಿ ಬದುಕಲು ಸಾಧ್ಯ ಎಂದು ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜಾನಾಯ್ಕ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ತಾಲೂಕು ಮೀನುಗಾರಿಕಾ ಇಲಾಖೆಯಿಂದ ಮೀನುಗಾರರಿಗೆ ಸರ್ಕಾರದ ವಿಶೇಷ ಯೋಜನೆಯಲ್ಲಿ ಶಾಖಾ ನಿರೋಧಕ ಪೆಟ್ಟಿಗೆ ಮತ್ತು ಜೀವರಕ್ಷಕ ಲೈಫ್ ಜಾಕೆಟ್ಗಳನ್ನು ವಿತರಿಸಿ ಮಾತನಾಡಿದರು.
ಸಂಕಷ್ಟದಲ್ಲಿ ಮೀನುಗಾರರು: ಬರಗಾಲದಿಂದ ಕೆರೆಗಳು ಮಳೆಯಿಲ್ಲದೆ ಖಾಲಿಯಾಗಿ ಮೀನುಗಾರರು ಸಂಕಷ್ಟದಲ್ಲಿ ಜೀವನ ಸವೆಸುವ ಮೂಲಕ ಬೇರೆ ಬೇರೆ ಉದ್ಯೋಗ ಅರಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಸರ್ಕಾರಗಳು ಮೀನುಗಾರರ ಸಂಕಷ್ಟ ನಿವಾರಣೆಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದರು. ಇದೀಗ ಜನ ಜಾನುವಾರುಗಳ ಸಂಕಷ್ಟ ಅರಿತು ಮಳೆರಾಯ ಕಣ್ಣು ಬಿಡುವ ಮೂಲಕ ಕೆಲ ದಿನಗಳಿಂದ ಮಳೆ ಬರುವ ಮೂಲಕ ಕೆರೆಕಟ್ಟೆಗಳು ತುಂಬುತ್ತಿವೆ. ಆ ಮೂಲಕ ಕೆಲಸವಿಲ್ಲದೇ ಇದ್ದ ಮೀನುಗಾರರ ಮುಖದಲ್ಲಿ ಇದೀಗ ಸಂತಸ ಅರಳಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರ ಕೂಡ ಮೀನುಗಾರರಿಗೆ ಅಗತ್ಯವಾಗಿರುವ ಸಲಕರಣೆ ನೀಡುವ ಮೂಲಕ ಜೀವ ರಕ್ಷಕ ಸಾಧನಗಳನ್ನು ಕೂಡ ವಿತರಸುತ್ತಿರುವುದು ಸಂತಸದ ಸಂಗತಿಯಾಗಿದೆ. ಫಲಾನುಭವಿಗಳು ಇವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದವರು ಹೇಳಿದರು.
ಯಳ್ಳಂಬಳಸೆ ಜಿಪಂ ಸದಸ್ಯೆ ಶಶಿರೇಖಾ ಸುರೇಶ್ ಮಾತನಾಡಿ, ಮೀನುಗಾರರ ಬದುಕು ಅಭದ್ರತೆಯ ಜೀವನವಾಗಿದ್ದು, ಜೀವದ ಹಂಗು ತೊರೆದು ಕೆಲಸ ಮಾಡುವ ಮೂಲಕ ಸಂಕಷ್ಟದಲ್ಲಿ ಜೀವನ ಸವೆಸುತ್ತಿದ್ದಾರೆ. ಸರ್ಕಾರ ಅವರ ಭದ್ರತೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಬೇಕು ಎಂದರು.
ಮೀನುಗಾರಿಕಾ ಸಹಾಯಕ ನಿರ್ದೇಶಕ ಮಹದೇವಯ್ಯ ಮಾತನಾಡಿ, ಸರ್ಕಾರದ ಯೋಜನೆಯಿಂದ ಶಾಖ ನಿರೋಧಕ ಪೆಟ್ಟಿಗೆಗಳು ಮತ್ತು ಜೀವರಕ್ಷಕ ಸಾಧನವಾದ ಲೈಫ್ ಜಾಕೆಟ್ ವಿತರಿಸಲಾಗುತ್ತಿದೆ ಎಂದು ಹೇಳಿದರು. ಮುಖಂಡ ರಾಜಾನಾಯ್ಕ, ಮೀನುಗಾರಿಕಾ ಸಂಘದ ಪದಾಧಿಕಾರಿ ಅಬ್ದುಲ್ ಮಜೀದ್, ಕವಿತಾ ಜಗದೀಶ್, ಜರೀನಾಬಿ, ಅಬ್ದುಲ್ ಸಲಾಂ, ಹಾಲಮ್ಮ ತಮ್ಮಯ್ಯ, ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

