ಚಿಕ್ಕಮಗಳೂರು

ಕುಡಿವ ನೀರಿಗೆ ರು. 58 ಕೋಟಿ ಅನುದಾನ

Published On :

ಕ.ಪ್ರ.ವಾರ್ತೆ  ತರೀಕೆರೆ  ಜೂ.8 ರಾಜ್ಯದ ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ ಸರ್ಕಾರ ರು. 58.77 ಕೋಟಿ ಮೀಸಲಿರಿಸಿದೆ ಎಂದು ಸಚಿವ ಖಮರುಲ್ಲಾ ಇಸ್ಲಾಂ ತಿಳಿಸಿದ್ದಾರೆ.
 ಶನಿವಾರ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ನೂತನ ಸಚಿವರು ಹಾಗೂ ನೂತನ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಇದಕ್ಕಾಗಿ ಸರ್ಕಾರದಿಂದ ರು. 40 ಕೋಟಿ ಮತ್ತು ರು. 18.77 ಕೋಟಿ ಇಲಾಖೆಯಲ್ಲಿದ್ದು ಒಟ್ಟು ರು. 58.77 ಕೋಟಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ಉಪಯೋಗಿಸಿ, ಬೋರ್‌ವೆಲ್ ಶುದ್ಧೀಕರಿಸುವುದು, ಹೊಸ ಬೋರ್ ವೆಲ್ ಕೊರೆಸುವುದು ಇತ್ಯಾದಿಗಳಿಗಾಗಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು. ರಸ್ತೆ, ಚರಂಡಿ, ವಿದ್ಯುತ್ ಇತ್ಯಾದಿಗಳ ಸಮರ್ಪಕ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಹೊಸ ಕ್ರೀಯಾಯೋಜನೆ ತಯಾರಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ವಿವರವಾಗಿ ಚರ್ಚೆ: ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಇದಕ್ಕಾಗಿ ಸಂಘದ ಪದಾದಿಕಾರಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ಏರ್ಪಡಿಸಿ ಬೇಡಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗುವುದು ಎಂದರು.
 ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ರಾಜ್ಯಾದ್ಯಂತ 6 ಕೋಟಿ ಜನರ ಅರೋಗ್ಯವನ್ನು ನೀವು ಕಾಪಾಡುತ್ತಿದ್ದೀರಿ, ನಿಮ್ಮ ಎಲ್ಲ ಬೇಡಿಕೆಗಳು ಈಡೇರಬೇಕು ಎಂದರು.
4ನೇ ಹಂತದ ಯೋಜನೆ: ತರೀಕೆರೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಭದ್ರಾ ನದಿಯಿಂದ 4ನೇ ಹಂತದ ಕುಡಿಯುವ ನೀರಿನ ಯೋಜನಗಾಗಿ ಪುರಸಬೆಗೆ ವಿಶೇಷ ಅನುದಾನ ನೀಡಬೇಕು. ಪಟ್ಟಣಕ್ಕೆ ಒಳಚರಂಡಿ ಯೋಜನೆ ಅಗತ್ಯವಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಟೆಂಡರ್: ವಿಧಾನ ಸಭಾ ಅಧಿವೇಶನದ ನಂತರ ಸಮೀಪದ ಜಂಬದಹಳ್ಳ ಜಲಾಶಯ ಯೋಜನೆ ಕಾರ್ಯಗತಕ್ಕೆ ರು. 35 ಕೋಟಿಯಲ್ಲಿ ಶೀಘ್ರ ಟೆಂಡರ್ ಕರೆಯಲಾಗುವುದು. ಇದರಿಂದ ರೈತರ ಬದುಕು ಹಸನಾಗುತ್ತದೆ ಎಂದರು.
 ಸಂಘದ ರಾಜ್ಯಾಧ್ಯಕ್ಷ ಟಿ.ಆರ್. ಸತ್ಯನಾರಾಯಣ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ 209 ಸ್ಥಳೀಯ ಸಂಸ್ಥೆಗಳಿದ್ದು, ಇವುಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸಾರ್ವಜನಿಕರ  ಹಿತವೇ ಮುಖ್ಯವೆಂದು
ತಿಳಿದು ದುಡಿಯುವ ಕರ್ಮಯೋಗಿಗಳು. ಸರ್ಕಾರ ಸಂಘದ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
 ಸಂಘದ ವತಿಯಿಂದ ರಾಜ್ಯಾಧ್ಯಕ್ಷ ಟಿ.ಆರ್. ಸತ್ಯನಾರಾಯಣ್ ಮತ್ತುಪದಾದಿಕಾರಿಗಳು ಸಚಿವ ಖಮರುಲ್ಲಾ ಇಸ್ಲಾಂ, ಶಾಸಕ  ಜಿ.ಎಚ್.ಶ್ರೀನಿವಾಸ್‌ರನ್ನು ಸನ್ಮಾನಿಸಿದರು. ಸಂಘದ ಪದಾದಿಕಾರಿಗಳು, ಪುರಸಭಾ ಸದಸ್ಯರು, ಪುರಸಭೆ ಮಖ್ಯಾಧಿಕಾರಿ ಕೆ.ಆರ್. ಪಲ್ಲವಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.