ರಸ್ತೆಯಲ್ಲಿ ಗುಂಡಿಗಳದೇ ದರ್ಬಾರು
ಕ.ಪ್ರ.ವಾರ್ತೆ, ತರೀಕೆರೆ, ಜೂ.10
ರಸ್ತೆಯಲ್ಲಿ ಟಾರೇ ಇಲ್ಲ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಆಳದ ಗುಂಡಿಗಳು, ವಾಹನಗಳು ಪದೇ ಪದೇ ಸಂಚರಿಸಿ ಹಲವಾರು ಕಡೆ ಕೃತಕವಾಗಿ ನಿರ್ಮಾಣವಾದ ಬೈಪಾಸ್ ರಸ್ತೆ. ಬಸ್ಸಿನ ಪ್ರಯಾಣವೆಂದರೆ ಪ್ರಯಾಣಿಕರಿಗೆ ಯಾಗವಿದ್ದಂತೆ...
ಇದು ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ನಾಲ್ಕು ಜಿಲ್ಲೆಗಳಿಗೆ ನಿರಂತರ ಸಂಪರ್ಕ ಸಾದಿಸುತ್ತಿರುವ ಚೆನ್ನಗಿರಿ, ಬುಕ್ಕಾಂಬುದಿ, ಅಜ್ಜಂಪುರ ಮಾರ್ಗವಾಗಿ ಬೀರೂರಿಗೆ ಇರುವ ರಾಜ್ಯ ಹೆದ್ದಾರಿಯ ಕಥೆ.
ದುರಸ್ತಿ ಕಂಡಿಲ್ಲ: ಪ್ರತಿನಿತ್ಯ ಪ್ರಯಾಣಿಕರ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೆ ರಸ್ತೆ ಕಳೆದ 9 ವರ್ಷಗಳಿಂದ ದುರಸ್ತಿಯನ್ನೇ ಕಂಡಿಲ್ಲ ಎಂದು ಜಿಲ್ಲಾ ಬಸ್ ಅಸೋಸಿಯೇಶನ್ ಆರೋಪಿಸಿದೆ. ಅಲ್ಪಸ್ವಲ್ಪ ರೋಡ್ ಪ್ಯಾಕಿಂಗ್ ಕಾರ್ಯ ನೆಡೆದಿದ್ದರೂ ಅದು ಅತ್ಯಂತ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸಂಘ ದೂರಿದೆ.
ಮಾರ್ಗ ಮಧ್ಯದಲ್ಲೇ ಸ್ಟಾಪ್: ರಸ್ತೆ ಚೆನ್ನಾಗಿದ್ದರೆ ಬೀರೂರಿನಿಂದ ಅಜ್ಜಂಪುರ ನಡುವೆ ಎಲ್ಲಾ ಹಳ್ಳಿಗಳಲ್ಲೂ ಪ್ರಯಾಣಿಕರನ್ನು ಏರಿಳಿಸಿಕೊಂಡು ಅರ್ಧ ಗಂಟೆಯೊಳಗೆ ತಲುಪಬಹುದು. ಆದರೆ
ಹದಗೆಟ್ಟ ರಸ್ತೆಯಲ್ಲಿ 15 ಕಿಮೀ ರಸ್ತೆಯನ್ನು ಗಂಟೆಯಾದರೂ ಕ್ರಮಿಸಲು ಸಾಧ್ಯವಿಲ್ಲದಂತಾಗಿದೆ. ಈ ಕೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳ ಬಿಡಿ ಭಾಗಗಳಾದ ಟೈರು, ಬಸ್ಸಿನ ಬೋಲ್ಟ್ ನಟ್ ಎಲ್ಲೆಂದರಲ್ಲಿ ಮುರಿದು ಹೋಗಿ ಬಸ್ಸು ಮಾರ್ಗ ಮಧ್ಯದಲ್ಲೇ ಕೆಟ್ಟು ನಿಂಲ್ಲುತ್ತದೆ.
ಸಾಲು ಮರ ನಾಶ: ಸಂಪೂರ್ಣವಾಗಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಬೀರೂರಿನಿಂದ ಬುಕ್ಕಾಂಬುದಿವರೆಗೆ ಅನೇಕ ವರ್ಷಗಳಿಂದ ಸೊಗಸಾಗಿ ಬೆಳೆದಿದ್ದ ನೂರಾರು ಸಾಲು ಮರಗಳನ್ನು ಕಡಿದುರುಳಿಸಿ ವರ್ಷಕ್ಕೂ ಹೆಚ್ಚು ದಿನಗಳಾದವು. ಕಡಿದ ಮರಗಳೆಲ್ಲಾ ಅನಾಥವಾಗಿ ಅಲ್ಲಲ್ಲೇ ಬಿದ್ದಿದೆ.
ರಸ್ತೆ ಅಭಿವೃದ್ಧಿ ಪಡಿಸಲು ಗುತ್ತಿಗೆದಾರರನ್ನು ಗೊತ್ತು ಪಡಿಸಿ ಅವರಿಗೆ ಕಾಮಗಾರಿ ಕಾರ್ಯ ನೀಡಿ ಆಗಿದೆ. ಅದರೆ ಈವರೆವಿಗೂ ಕೆಲಸ ಆಗಿಲ್ಲ. ಅಯೋಗ್ಯ ರಸ್ತೆಯಲ್ಲಿ ವಾಹನ ಸಂಚರಿಸುವ ಗೋಳು ಎಂದು ತಪ್ಪುತ್ತದೆ ಎಂದು ಚಿಕ್ಕಮಗಳೂರು ಜಲ್ಲಾ ಬಸ್ ಅಪರೇಟರ್ಸ್ ಅಸೋಸಿಯೇಶನ್ ಸಂಬಂಧಿಸಿದವರಿಗೆ ದೂರು ನೀಡಿದೆ. ರಸ್ತೆ ಮೇಲ್ದರ್ಜೆಗೇರಿಸುವ ಮಾತು ಒತ್ತಟ್ಟಿಗಿರಲಿ ವಾಹನಗಳು ಸುರಕ್ಷಿತವಾಗಿ ಸಂಚರಿಸುವಷ್ಟು ಕಾರ್ಯ ಬೇಗನೆ ಆದರೆ ಉತ್ತಮ ಎಂದು ಅದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

