ಚಿಕ್ಕಮಗಳೂರು

ಎನ್‌ಆರ್ ಪುರದಲ್ಲಿ ಉರೂಸ್ ಉತ್ಸವ

Published On :

ನರಸಿಂಹರಾಜಪುರ: ಧರ್ಮದ ಆಚರಣೆಯಿಂದ ಮನಸ್ಸಿಗೆ ಶಾಂತಿ ಸಿಗುವ ಜೊತೆಗೆ ಆತ್ಮ ಸಂಸ್ಕಾರಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ತಿಳಿಸಿದರು.
 ಇತ್ತೀಚೆಗೆ ಪ್ರವಾಸಿ ಮಂದಿರದ ಸಮೀಪದ ದರ್ಗಾದಲ್ಲಿ ನಡೆದ ದರ್ಗಾಹೆ ಹಜ್ರತ್ ಸೈಯದ್ ಹಯಾತ್ ಷಾ ವಲಿ 124 ನೇ ಉರೂಸ್ ಸಂದಲ್ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಜಾಮೀಯಾ ಮಸೀದಿ ಆಡಳಿತಾಧಿಕಾರಿ ಮುಜೀಬ್ ಖಾನ್ ಮಾತನಾಡಿ, ಸೈಯ್ಯದ್ ಹಯಾತ್ ಷಾ ವಲಿ ಅವರು ದೇವ ಮಾನವರಾಗಿದ್ದರಿಂದಲೇ ಉರೂಸ್‌ನಲ್ಲಿ ಎಲ್ಲ ಧರ್ಮ, ಜಾತಿಯವರು ಹರಕೆ ತೀರಿಸಲು ಬರುತ್ತಿದ್ದಾರೆ ಎಂದರು.
 ಸಭೆಯ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಮುನವರ್ ಪಾಷಾ ವಹಿಸಿದ್ದರು. ಮೂಡಬಿದ್ರಿಯ ಮೌಲಾನ ಜುನ್ನು ರೇನ್, ಅಪೀಜ್ ಎಕ್ಬಾಲ್ ರೆಜಾ, ಗೌಸ್ ಪಾಷಾ, ಶಾಖಾದ್ರಿ ಸೈಯ್ಯದ್ ಗೌಸ್ ಮೊಯಿದ್ದೀನ್, ಮೊಕ್ತಿಯಾರ್ ಅಹಮ್ಮದ್ ರೆಜ್ವಿ, ಲಕ್ಷ್ಮಣಶೆಟ್ಟಿ, ಇ.ಸಿ. ಶೇಯಿಯಾರ್ ಇದ್ದರು. ಉರೂಸ್ ಅಂಗವಾಗಿ ಗಂದೋತ್ಸವ ಪ್ರಮುಖ ಬೀದಿಯಲ್ಲಿ ಸಾಗಿ ದರ್ಗಾಕ್ಕೆ ಬರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.