ಚಿಕ್ಕಮಗಳೂರು

ಅಕ್ರಮ ನಡೆದಿದ್ದರೆ ತಪ್ಪಿತಸ್ಥರನ್ನು ಶಿಕ್ಷಿಸಿ: ನಳಿನಾ

Published On :

ಕ.ಪ್ರ. ವಾರ್ತೆ ಮೂಡಿಗೆರೆ  ಜೂ.13
ಕುಡಿಯುವ ನೀರಿನ ಮೋಟಾರ್ ದುರಸ್ತಿ ವಿಚಾರದಲ್ಲಿ ಅಕ್ರಮ ನಡೆದಿಲ್ಲ. ಒಂದು ವೇಳೆ ಅಕ್ರಮ ನಡೆದಿರುವ ಸಾಧ್ಯತೆಗಳಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬಹುದು ಎಂದು ಹೆಸಗಲ್ ಗ್ರಾಪಂ ಅಧ್ಯಕ್ಷರಾದ ನಳಿನಾ  ಹಾಗೂ ಸದಸ್ಯರು ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕೆಲವು ಮಾಧ್ಯಮಗಳು ಮೇಲಿಂದ ಮೇಲೆ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಮೋಟಾರ್ ದುರಸ್ತಿ ವಿಚಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿ ಮಾಡುತ್ತಿವೆ.
ಶಿಕ್ಷೆಯಾಗಲಿ: ಆದರೆ ತಮ್ಮೆಲ್ಲರ ಗಮನಕ್ಕೆ ಬಂದಂತೆ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನಡೆದಿದ್ದರೆ ಪಂಚಾಯತ್ ರಾಜ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಜತೆಗೆ ಸಂಬಂಧಿಸಿದವರ ಮೇಲೆ ಕಠಿಣ ಶಿಕ್ಷೆ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಗೆ ಅಸಮರ್ಪಕ ಮಾಹಿತಿಯೊಂದಿಗೆ ಬಂದಿದ್ದ ಅಧ್ಯಕ್ಷರ ಸಹಿತ ಸದಸ್ಯರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ತಡ ಬಡಾಯಿಸಿದರು. ಮೋಟಾರ್ ದುರಸ್ತಿಗೆ ಹೆಚ್ಚಿನ ಹಣ ಸಂದಾಯವಾದ ಕುರಿತು ಸೇರಿದಂತೆ ಹೊಸ ಮೋಟಾರ್ ಮತ್ತಿತರ ನೂತನ ವಸ್ತುಗಳ ಖರೀದಿ ಬಿಲ್‌ಗಳಲ್ಲಿ ಟಿನ್ ನಂಬರ್‌ಗಳಿಲ್ಲದಿರುವ, ತೆರಿಗೆ ಪಾವತಿಸದಿರುವ, ನಿಯಮಗಳನ್ನು ಮೀರಿ ಬಿಲ್ ಪಾವತಿಸಿರುವ ಕುರಿತು ಸಮರ್ಪಕ ಉತ್ತರಗಳು ಬರಲಿಲ್ಲ.
ಅಸಹಾಯಕತೆ: ಉಪಾಧ್ಯಕ್ಷ ಶಕ್ತಿನಗರ ಶಿವಣ್ಣ ಮಾತನಾಡಿ, ಹೆಚ್ಚಿನ ಮಾಹಿತ ನಮ್ಮಲ್ಲಿಲ್ಲ. ಕೊಲ್ಲೀಬೈಲ್, ಹಳ್ಳದಗಂಡಿ ಸಹಿತ ಮೂರು ಮೋಟಾರುಗಳ ದುರಸ್ತಿಗೆ ಬರುತ್ತಿಲ್ಲ. ಆದ್ದರಿಂದ ಕುಡಿಯುವ ನೀರು ಸರಬರಾಜಿಗೆ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಈ ಸಮಯದಲ್ಲಿ ಅಧ್ಯಕ್ಷೆ ನಳಿನಾ, ಸದಸ್ಯರಾದ ಅಬ್ದುಲ್ ಲತೀಪ್, ದಶರಥ್, ದಿವಾಕರ್, ಮೊಹಿದ್ದೀನ್ ಶೇಠ್, ಕೇಶವ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.