ಭದ್ರಾ ಕಾಮಗಾರಿಗೆ ಸಹಕರಿಸಿ: ದತ್ತ
ಕಪ್ರ ವಾರ್ತೆ, ಕಡೂರು, ಜೂ.14
2003 -04ರಲ್ಲಿ ಚಾಲನೆಗೊಂಡಿದ್ದ ಭದ್ರಾ ನದಿಯಿಂದ ಕಡೂರು ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಇದ್ದ ಅಡ್ಡಿ ಆತಂಕಗಳ ನಿವಾರಣೆಗಾಗಿ ಶಾಸಕ ವೈ.ಎಸ್.ವಿ. ದತ್ತ ಅಧಿಕಾರಿಗಳು, ಮುಖಂಡರೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳ ಭೇಟಿ ನೀಡಿ ಕಾಮಗಾರಿ ಮುಂದುವರಿಕೆಗೆ ಸಹಕರಿಸುವಂತೆ ಮನವಿ ಮಾಡಿದರು.
ಕಡೂರಿನಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 2003ರ ಅ.23ರಿಂದ ಈ ಯೋಜನೆ ಉಸ್ತುವಾರಿ ವಹಿಸಿರುವ ಎಕ್ಸಿಕ್ಯೂಟೀವ್ ಇಂಜಿನಿಯರ್ವೈದೇಹಿ, ವ್ಯವಸ್ಥಾಪಕ ರಂಗನಾಥ್ ಮತ್ತು ವಿವಿಧ ಮುಖಂಡರೊಂದಿಗೆ ತರೀಕೆರೆ ಸಮೀಪದ ಹಳಿಯೂರು ಬಳಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಶೇ.80 ರಷ್ಟು ಕಾಮಗಾರಿ ಪೂರ್ಣ: ಭದ್ರಾನದಿಯಿಂದ ಕಡೂರು ಹಾಗು ಬೀರೂರು ಪಟ್ಟಣಗಳಿಗೆ ನೀರೊದಗಿಸುವ ಕಾಮಗಾರಿ ಶೇ.80 ರಷ್ಟು ಮುಗಿದಿದೆ. ಈ ಯೋಜನೆಯಿಂದ ಕಡೂರಿಗೆ 12 ದಶಲಕ್ಷ ಲೀಟರ್, ಬೀರೂರಿಗೆ 7 ದಶಲಕ್ಷ ಲೀಟರ್ ಮತ್ತು ಯೋಜನೆಯ ಮಾರ್ಗ ಮದ್ಯದ 34 ಹಳ್ಳಿಗಳಿಗೆ 2 ದಶಲಕ್ಷ ಲೀಟರ್ ಸೇರಿದಂತೆ ದಿನಕ್ಕೆ 21 ದಶಲಕ್ಷ ಲೀಟರ್ ನೀರು ಬೇಕಾಗುತ್ತದೆ. ನೀರು ವಿತರಣೆಗಾಗಿ 19.10 ಕೋಟಿ, ಬೀರೂರು ಪಟ್ಟಣದ ಕುಡಿಯುವ ನೀರು ಪೂರೈಕೆಗೆ 12.75 ಕೋಟಿ ಬೇಕಾಗುತ್ತದೆ ಎಂದರು.
ಯೋಜನೆ ಜಾರಿಗೆ ಕೆ.ಎಂ. ಕೃಷ್ಣಮೂರ್ತಿ, ಮಾಜಿ ಶಾಸಕರಾದ ಡಾ ವೈ.ಸಿ. ವಿಶ್ವನಾಥ್, ಕೆ.ಬಿ. ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲ ನಾಯಕರು ಪ್ರಯತ್ನಿಸಿದ್ದು ಕಾಮಗಾರಿ ಮುಂದುವರಿಕೆಗೆ ಎಲ್ಲರ ಸಹಕಾರದಿಂದ ನೀರು ತರುವ ಕಾರ್ಯ ನಡೆಯುತ್ತಿದೆ ಎಂದರು.
ನಂತರ ಲಕ್ಕವಳ್ಳಿಯ ಗ್ರಾಮ ಪಂಚಾಯ್ತಿಗೆ ತೆರಳಿ ದತ್ತ, ಅಧ್ಯಕ್ಷರು ಸದಸ್ಯರು ಮತು ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಮಾತನಾಡಿ, ಈ ಯೋಜನೆಯಿಂದ ಲಕ್ಕವಳ್ಳಿಯ ಜನರ ಕುಡಿವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಕಳೆದ 13 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಜಾರಿಯಾಗಲು ಎಲ್ಲರ ಸಹಕಾರ ಮುಖ್ಯ ಎಂದರು.
ನೀರಿಗೆ ತೊಂದರೆ: ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ನಮಗೆ ಡ್ಯಾಂ ಹತ್ತಿರವಿದ್ದರೂ ಕೂಡ ನೀರಿಗೆ ತೊಂದರೆಯಾಗುತ್ತಿದೆ. ಇದನ್ನು ಅರಿತುಕೊಂಡು ಲಕ್ಕವಳ್ಳಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗ, ತರೀಕೆರೆ ಬಳಿ ಶುದ್ಧೀಕರಣವಾದ ನೀರು ಲಕ್ಕವಳ್ಳಿ ಜನರಿಗೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಕೃತಜ್ಞತೆ: ನಂತರ ಸಭೆಯಲ್ಲಿ ಮಾತನಾಡಿದ ದತ್ತ, ರೈತರ ಜಮೀನುಗಳಿಗೆ ತೊಂದರೆಯಾಗದಂತೆ ರಸ್ತೆಯ ಬಲಭಾಗದಿಂದ 52 ಕಿ.ಮೀ. ವರೆಗೆ ಪೈಪುಗಳನ್ನು ಅಳವಡಿಸಿ ಇದರಿಂದ ಮಾರ್ಗ ಮದ್ಯದ ಹಳ್ಳಿಯ ಜನರಿಗೂ ನೀರು ಸಿಗಲಿದೆ. ಇದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಎರಡು ಪಟ್ಟಣಗಳಿಗೆ ನೀರು ಪೂರೈಸುವ ಭದ್ರಾನದಿಯ ಮುಂಭಾಗದಲ್ಲಿರುವ ಪ್ರಮುಖ ಜಾಕ್ ವೆಲ್ ವೀಕ್ಷಿಸಿದರು.
ಕೆ.ಎಂ. ಮಹೇಶ್ವರಪ್ಪ, ಭಂಢಾರಿ ಶ್ರೀನಿವಾಸ್,ಎನ್. ಇಮಾಮ್, ಕೆ.ಎಸ್. ರಮೇಶ್, ಸೀಗೇಹಡ್ಲು ಹರೀಶ್, ನಾಗರಾಜ್, ಜಿಗಣೇಹಳ್ಳಿ ನೀಲಕಂಠಪ್ಪ, ಕಾಂತರಾಜು, ತಮ್ಮಯ್ಯಪ್ಪ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

