ಚಿಕ್ಕಮಗಳೂರು

ಅವನತಿ ಹಾದಿಯಲ್ಲಿ ಸಹಕಾರಿ ಚಳವಳಿ

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು   ಜೂ.16
ಸಹಕಾರಿ ಚಳವಳಿಯಲ್ಲಿ ರಾಜಕಾರಣ ಪ್ರವೇಶ ಆದ ನಂತರದಲ್ಲಿ ಸಹಕಾರಿ ಚಳವಳಿಗಳು ಅವನತಿ ಹಾದಿ ಹಿಡಿಯುತ್ತಿವೆ ಎಂದು ಶಾಸಕ ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಿದರು.
ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ವೀರಶೈವ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಉದ್ಯೋಗ ಮತ್ತು ಹಣಕಾಸಿನ ನೆರವು  ನೀಡುತ್ತವೆ. ಸಹಕಾರ ಸಂಘಗಳು ರಾಜಕಾರಣದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರಕ್ಕೆ 108 ವರ್ಷಗಳ ಇತಿಹಾಸವಿದೆ. 1905ರಲ್ಲಿ ಉತ್ತರ ಕರ್ನಾಟಕದ ಸಿದ್ದಣ್ಣಗೌಡ ಅವರು ಸಹಕಾರ ಚಳವಳಿ ಬೀಜ ಬಿತ್ತುವ ಕೆಲಸ ಮಾಡಿದರು ಎಂದ ಹೇಳಿದರು.
ಕ್ರಿಯಾಶೀಲರಾಗಿ: ಡಾ. ವೈದ್ಯನಾಥನ್ ವರದಿ ಶಿಫಾರಸಿನ ಪ್ರಕಾರ ಸಹಕಾರಿಗಳ ಸಂಘಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಆದ ಕಾರಣ, ಸಂಘಗಳು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಘವನ್ನು ಉದ್ಘಾಟಿಸಿ ಮಾತನಾಡಿದ ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ, ಬಾಳು ಬಾಳಗೊಡು ಎಂಬುದು ನಾಣ್ಣುಡಿ, ಅದರಂತೆ ನಾವು ಸಾರ್ಥಕ ಬದುಕನ್ನು ಜೀವಿಸುವುದಲ್ಲದೇ ಸಮಾಜದಲ್ಲಿನ ಇತರರಿಗೂ ಸಹಕಾರಿಯಾಗಿ ಬದುಕುವುದು ಲೇಸು. ಪತ್ತಿನ ಸಹಕಾರ ಸಂಘದ ಅವಶ್ಯಕತೆ ಇದ್ದು. ಇದೀಗ ಕೈಗೂಡಿದೆ. ಅದರಂತೆ ಸಂಘ ಶಕ್ತಿಯಾಗಿ ಬೆಳೆದು ಸಮಾಜದ ಒಗ್ಗಟ್ಟು ಕಾಪಾಡಲು ಶ್ರಮಿಸಲಿ ಎಂದು ಹೇಳಿದರು.
ಪ್ರೋತ್ಸಾಹ ಅಗತ್ಯ: ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಯುವ ಮಿತ್ರರು, ಹಿರಿಯರ ಮಾರ್ಗದರ್ಶನದಲ್ಲಿ ಈ ಕೆಲಸಕ್ಕೆ ಕೈ ಹಾಕಿರುವುದು ಅಭಿನಂದನೀಯ. ನಾವು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಿದೆ ಎಂದರು. ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಹಿಳಾ ಜಾಗೃತಿ ಸಂಘದ ಗೌರಮ್ಮ ಬಸವೇಗೌಡ ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಪಿ. ಬಸವರಾಜಪ್ಪ ಮಾತನಾಡಿದರು. ಸಂಘದ ಪ್ರವರ್ತಕ ಓಂಕಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಮೌಳಿ ಪ್ರವರ್ತಕರ ಕಿರುಪರಿಚಯ ಮಾಡಿದರು. ಎಚ್.ಸಿ. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ವೀರೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.