'ಸರ್ಕಾರ ಅಡಕೆ, ತೆಂಗು ಬೆಳೆಗಾರರ ನೆರವಿಗೆ ಬರಲಿ'
ಕ.ಪ್ರ.ವಾರ್ತೆ ಟಿ ಕಡೂರು ಟಿ ಜೂ.25
ಅಂತರ್ಜಲ ಬತ್ತಿಹೋಗುತ್ತಿದ್ದು, ತಾಲೂಕಿನ ಸಾವಿರಾರು ಹೆಕ್ಟೇರ್ ಅಡಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ. ಸರ್ಕಾರವು ಕೂಡಲೇ ನಷ್ಟದ ವರದಿ ತರಿಸಿಕೊಂಡು ರೈತರ ನೆರವಿಗೆ ಬರಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಆರೇಳು ವರ್ಷಗಳಿಂದ ತಾಲೂಕಿಗೆ ಬರಗಾಲ ಅವರಿಸಿ ಅಂತರ್ಜಲ ಬತ್ತಿಹೋಗಿವೆ. ನದಿ ಮೂಲಗಳು ಇಲ್ಲದೆ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕೊಳವೆಬಾವಿಗಳಿಂದ ಸ್ವಲ್ಪಮಟ್ಟಿಗೆ ಅಡಕೆ ತೋಟಗಳನ್ನು ಉಳಿಸಿಕೊಂಡಿದ್ದ ರೈತರು ಮಳೆಯಿಲ್ಲದೆ ಒಣಗಿರುವುದರಿಂದ ಮರಗಳನ್ನು ಕಡಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಟಾಬಯಲು: ಪಟ್ಟಣದಿಂದ ಸಾಗುವ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮರಗಳ ಕಡಿತಲೆ ಮಾಡುವ ಮೂಲಕ ಮಾರಣ ಹೋಮ ನಡೆಯುತ್ತಿದೆ. ರೈತರು ವಿಧಿಯಿಲ್ಲದೆ ಒಣಗಿರುವ ಮರಗಳನ್ನು ನೋಡಿ ಸಂಕಟ ತಾಳಲಾರದೆ ಕಡಿದು ಹಾಕುತ್ತಿರುವುದನ್ನು ನೋಡಬಹುದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವು ರೈತರ ನೆರವಿಗೆ ಬರಬೇಕು ಎಂದು ಹೇಳಿದ್ದಾರೆ.
ಇನ್ನು ಕಡೂರು, ಬೀರೂರು ಪಟ್ಟಣಗಳಲ್ಲಿ ಅಂತರ್ಜಲದ ಕೊರತೆಯಿಂದ ಇದ್ದ ಕೊಳವೆಬಾವಿಗಳಲ್ಲಿನ ನೀರು ಬತ್ತಿಹೋಗಿದೆ. ನೀರಿಗೆ ತೊಂದರೆಯಾಗಿದೆ. ಸರ್ಕಾರ ಮೀಸಲಾತಿ ವಿಳಂಬದಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಹೊಸದಾಗಿ ಕೊಳವೆಬಾವಿಗಳಿಗೆ ಆದೇಶ ನೀಡಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

