ಮೂಡಿಗೆರೆಯಲ್ಲಿ ಅಕ್ರಮ ಮರಳು ವಶ
ಮೂಡಿಗೆರೆ: ಜೀವ ನದಿ ಹೇಮಾವತಿ ಉಳಿಸುವಂತೆ ಹಲವು ರೈತ ಮುಖಂಡರು ಮತ್ತು ಸಾರ್ವಜನಿಕರ ಹೋರಾಟದ ಫಲವಾಗಿ ಇಂದು ಜಿಲ್ಲಾಧಿಕಾರಿಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಆದೇಶ ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರುದ್ರಪ್ಪಾಜಿರಾವ್ ನೇತೃತ್ವದಲ್ಲಿ ದಾಳಿ ನಡೆಸುತ್ತಿರುವ ಪರಿಣಾಮ ಲಕ್ಷಾಂತರ ರೂ ಬೆಲೆಬಾಳುವ ಮರಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ.
ಗುರುವಾದ ಮರೇಬೈಲ್, ಮುತ್ತಿಗೆ ಪುರ ಹಾಗೂ ಅಣಜೂರ್ ನಲ್ಲಿ 30 ಟಿಪ್ಪರ್ ಅಕ್ರಮ ಮರಳು ಪತ್ತೆ ಹಚ್ಚಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮರಳಿನ ಗುಡ್ಡೆ ಪತ್ತೆ: ತಾಲೂಕಿನ ಹಂತೂರ್ ಗ್ರಾಮದಲ್ಲಿ ಕಡಿದಾದ ಪ್ರದೇಶದಲ್ಲಿ ಹೇಮಾವತಿ ನದಿಯ ದಂಡೆಯ ಬಳಿ 500 ಟ್ರ್ಯಾಕ್ಟರ್ ಲೋಡ್ಗೂ ಅಧಿಕ ಸಂಗ್ರಹಿಸಲಾಗಿದ್ದ ಮರಳಿನ ಗುಡ್ಡೆಯನ್ನು ತಹಸೀಲ್ದಾರ್ ನೇತೃತ್ವದ ತಂಡ ಪತ್ತೆ ಹಚ್ಚುವಲ್ಲಿ ಗುರುವಾರದ ದಿನದಂದು ಯಶಸ್ವಿಯಾಯಿತು. ಅಕ್ರಮವಾಗಿ ಸಂಗ್ರಹಿಸಿಟ್ಟುರುವ ಮರಳನ್ನು ತೆಗೆಯಲು ಅಸಾಧ್ಯವಾಗಿದ್ದು, ರಸ್ತೆಗಳು ಸಮರ್ಪಕವಿಲ್ಲದೇ ಇರುವುದರಿಂದ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರ ವಶಕ್ಕೆ ವಹಿಸಲಾಗಿದೆ. ಮಳೆ ಕಳೆದ ನಂತರವಷ್ಟೇ ಮರಳನ್ನು ಸಾಗಿಸುವಂತೆ ಅವರು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

