ಅಹಂ ಬಿಟ್ಟು ಒಂದಾಗಬೇಕು: ಸಿ.ಟಿ. ರವಿ
ಚಿಕ್ಕಮಗಳೂರು: ಬಿಜೆಪಿ ಮತ್ತು ಕೆಜೆಪಿಗೆ ಈಗಾಗಲೇ ನಷ್ಟವಾಗಿದೆ. ಅಹಂ ಬಿಟ್ಟು ಎಲ್ಲರೂ ಒಂದಾಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ವಾಸ್ತವಿಕತೆ ಅರಿವಿದ್ದರೂ ಕೂಡ ಅಹಂ, ಗುಂಪುಗಾರಿಕೆ ಮತ್ತು ತಪ್ಪು ನಿರ್ಧಾರದಿಂದಾಗಿ ಎರಡು ಪಕ್ಷಗಳಿಗೆ ನಷ್ಟವಾಗಿದೆ. ರಾಜ್ಯದ ಜನರ ಮತ್ತು ಕಾರ್ಯಕರ್ತರ ಅಪೇಕ್ಷೆ ಈ ಎರಡು ಪಕ್ಷಗಳು ಒಂದಾಗಬೇಕೆಂಬುದು ಎಂದು ಭಾನುವಾರ ಸುದ್ದಿಗಾರರೊಂದಿಗೆ ತಿಳಿಸಿದರು.
ಸೀಟುಗಳ ಲೆಕ್ಕಚಾರದಲ್ಲಿ ಕೂಡು, ಕಳೆಯುವುದರಲ್ಲಿ ನನಗೆ ನಂಬಿಕೆ ಇಲ್ಲ. ಬಿಜೆಪಿ ಮತ್ತು ಕೆಜೆಪಿ ಬೇರೆ ಬೇರೆ ಆಗಿದ್ದರಿಂದ ಪಕ್ಷದ ಕಾರ್ಯಕರ್ತರು ಅಸಹಾಯಕರಾಗಿದ್ದಾರೆ. ಮತದಾರರು ನೊಂದಿದ್ದಾರೆ. ಮತದಾರರಿಗೆ ಕಾಂಗ್ರೆಸ್ ಬೇಕಾಗಿಲ್ಲ. ನಮ್ಮ ಜಗಳದಲ್ಲಿ ಕಾಂಗ್ರೆಸ್ಗೆ ಲಾಭವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಅಹಂ ಬಿಟ್ಟು ಈಗಲಾದರೂ ಎಲ್ಲರೂ ಒಂದಾಗಬೇಕು. ಎರಡು ಪಕ್ಷಗಳ ಮುಖಂಡರು ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಸೂಕ್ತವಾದ ನಿರ್ಧಾರ ತೆಗೆದುಕೊಂಡರೆ ಸಂತೋಷ ಎಂದ ಶಾಸಕರು, ಪಕ್ಷದ ಸಂಸದೀಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.
ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಪರಮಾರ್ಶಿಸಲಾಗುವುದು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದರು.
ಅನುದಾನಕ್ಕೆ ತಡೆ: ತಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಕಾಂಗ್ರೆಸ್ ನಾಯಕರು ತಡೆ ಹಿಡಿದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದ ಅವಧಿಯಲ್ಲಿ ಮಾಡಿರುವ ಕೆಲಸವಾದರೂ ಏನೆಂಬುದು ಜನರು ನೋಡುತ್ತಾರೆ. ಬಿಜೆಪಿ ಅಭಿವೃದ್ಧಿಗೆ ಹಣ ಕೊಟ್ಟಿತು. ಕಾಂಗ್ರೆಸ್ನವರು ಅದನ್ನು ತಡೆ ಹಿಡಿದರು ಎಂಬ ಬಗ್ಗೆ ಜನರಿಗೆ ಅರಿವಿಗೆ ಬಂದಿದೆ ಎಂದು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ನವರು ತಡೆ ಹಾಕಿದರು. ಇದೀಗ ಕಾಮಗಾರಿಗಳ ಕಾರ್ಯಾದೇಶವನ್ನು ನೀಡದಂತೆ ತಡೆ ಹಾಕಿದ್ದಾರೆ. ಅಹಂಕಾರ, ಬಲಾಢ್ಯತನವನ್ನು ಜನರು ಮುಂದಿನ ದಿನಗಳಲ್ಲಿ ಕಿತ್ತು ಹಾಕಲಿದ್ದಾರೆ. ಅಭಿವೃದ್ಧಿಯ ವಿರೋಧಿ ಯೋಚನೆ ಮಾಡುವವರು ರಾಜಕೀಯದಲ್ಲಿ ಹೆಚ್ಚು ದಿನ ಉಳಿದುಕೊಳ್ಳುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

