ಕೀಟನಾಶಕ ಬಳಸುವಾಗ ಎಚ್ಚರವಿರಲಿ
ನರಸಿಂಹರಾಜಪುರ: ದ್ರಾಕ್ಷಿ ಹಣ್ಣು, ಶುಂಠಿ ಹಾಗೂ ಕೆಲವು ತರಕಾರಿಗಳಿಗೆ ರೋಗ ಬರದಂತೆ ವಿಷಯುಕ್ತ ಔಷಧಿ ಸಿಂಪರಣೆ ಮಾಡುತ್ತಿದ್ದು, ಇದನ್ನು ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಸಲಹೆ ನೀಡಿದರು.
ಕಮಾಲಾಪುರ ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಕೃಷಿ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿ, ಭಾರತದ ದೇಶದಲ್ಲಿ 200 ದಶ ಲಕ್ಷ ಮಿಲಿಯನ್ ಡಾಲರ್ ಆಹಾರ ದಾಸ್ತಾನು ಇದೆ. ಒಂದು ಮಾಹಿತಿ ಪ್ರಕಾರ ದಾಸ್ತಾನು ಇರುವ ಆಹಾರವನ್ನು ಶೇ.20 ರಷ್ಟು ಇಲಿ, ಹೆಗ್ಗಣಗಳೇ ನಾಶ ಮಾಡುತ್ತಿದೆ. ಸದ್ಯಕ್ಕೆ ಆಹಾರ ಧಾನ್ಯದ ಕೊರತೆ ಇಲ್ಲದಿದ್ದರೂ ರೈತರು ಆಹಾರದ ಬೆಳೆ ಬೆಳೆಯಲು ನಿಲ್ಲಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆ ಕಂಡು ಬರಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀತೂರು ಗ್ರಾಪಂ ಸದಸ್ಯ ಎನ್.ಪಿ. ರಮೇಶ ಮಾತನಾಡಿ, ಕೃಷಿ ಕಾರ್ಮಿಕರ ಕೊರತೆ, ಬೆಳೆಗಳಿಗೆ ನಿಶ್ಚಿತ ಬೆಲೆ ಇಲ್ಲದಿರುವುದು ಹಾಗೂ ಅವಿಭಕ್ತ ಕುಟಂಬಗಳು ಮಾಯವಾಗುತ್ತಿರುವುದರ ಪರಿಣಾಮ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಕೃಷಿ ಯಂತ್ರೋಪಕರಣಗಳು ಬಂದಿರುವುದರಿಂದ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರವಾಗಬಹುದು ಎಂದರು. ಕೃಷಿಕ ವೈ.ಎಸ್. ಸತ್ಯನಾರಾಯಣ, ನಾಗರಮಕ್ಕಿ ದೇವಸ್ಥಾನದ ವಹಿವಾಟುದಾರ ಎಂ.ವಿ. ಕೃಷ್ಣಮೂರ್ತಿ, ಕಮಾಲಾಪುರ ಶಾಲೆಯ ಶಿಕ್ಷಕಿಯರಾದ ಸಿ.ಕೆ. ಮಧು, ಎಸ್. ಸ್ಮಿತಾ,ಪ್ರಗತಿಪರ ಕೃಷಿಕ ದೇವಾಲೆಕುಣಜ ಶೃಂಗೇಶ್ವರ, ಪ್ರಾದ್ಯಾಪಕ ಎಸ್.ವಿ. ಪ್ರಭಾಕರ್, ಪ್ರಸನ್ನಕುಮಾರ್, ನಾಗರಾಜ್, ಗ್ರಂಥಪಾಲಕ ಎ.ಎಸ್. ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.
ನಂತರ ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಶಿಬಿರಾರ್ಥಿಗಳಿಗೆ ಹಾಗೂ ಕೃಷಿಕರಿಗೆ ಕೃಷಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾತ್ರಿ ಶಿಬಿರದ ದೀಪೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಮೇಣದಬತ್ತಿ ಹಚ್ಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

