ಚಿಕ್ಕಮಗಳೂರು

ಇಂದು ಗಮಕಗೋಷ್ಠಿ

Published On :

ಚಿಕ್ಕಮಗಳೂರು: ಕರ್ನಾಟಕ ಗಮಕ ಕಲಾ ಪರಿಷತ್‌ನ ಜಿಲ್ಲಾ ಶಾಖೆ ವತಿಯಿಂದ ಗುರುವಾರ ಸಂಜೆ 6 ಗಂಟೆಗೆ ನಗರದ ಬಸವನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿರುವ ಶಾರದಾ ಟೀಚರ್ ಅವರ ಮನೆಯಲ್ಲಿ ಮನೆಯಂಗಳದಿ ಗಮಕಗೋಷ್ಠಿನಡೆಯಲಿದೆ.
ತರಬೇತಿಗೆ ಅರ್ಜಿ ಆಹ್ವಾನ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕ, ಯುವತಿಯರಿಂದ  ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಲ್ಟಿ ಮೀಡಿಯಾ ಸಾಲ್ಯೂಷನ್, ಆಟೋ ಕ್ಯಾಡ್, ಕಾಲ್ ಸೆಂಟರ್ ತರಬೇತಿಯನ್ನು ನೀಡಲಾಗುವುದು, ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮಾ. 26 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಗಾಗಿ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಪಂ ಕಟ್ಟಡ, ಚಿಕ್ಕಮಗಳೂರು (ದೂ-08262- 220922) ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ನೋಂದಾವಣಿಗೆ ಸೈನಿಕರಿಗೆ ಸೂಚನೆ
ಇತ್ತೀಚೆಗೆ ರೆಕಾರ್ಡ್ಸ್ ಕಾರ್ಯಾಲಯದಿಂದ ಮಾಜಿ ಸೈನಿಕರಿಗೆ ಬರುವ ಪತ್ರಗಳು ವಿಳಾಸ ಸರಿ ಇರದ ಕಾರಣ ಮರಳಿ ರೆಕಾರ್ಡ್ಸ್ ಕಾರ್ಯಾಲಯಕ್ಕೆ ಹೋಗುವುದು ಕಂಡು ಬಂದಿರುತ್ತದೆ. ಮಾಜಿ ಸೈನಿಕರು ಮತ್ತು ಅವರ ಪತ್ನಿಯರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ತಮ್ಮ ಹೆಸರನ್ನು, ನೋಂದಾಯಿಸುವಾಗ ವಿಳಾಸ ಬದಲಾಗಿದ್ದಲ್ಲಿ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಅರ್ಜಿ ಮೂಲಕ ನೀಡಿ ಸರಿಪಡಿಸುವಂತೆ ಉಪ ನಿರ್ದೇಶಕರು, ಸೈನಿಕ ಮತ್ತು ಪುನರ್ವಸತಿ ಇಲಾಖೆ, ಹಾಸನ ಇವರು ಪ್ರಕಟಣೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.