ಮನೆಮದ್ದು ಕಾರ್ಯಕ್ರಮ
ಕಡೂರು: ತಾಲೂಕು ಸೋಮನಹಳ್ಳಿಯಲ್ಲಿ ಮನೆಮದ್ದು ಸ್ವಸ್ತವೃತ ಮತ್ತು ಆಯುಷ್ ಅರಿವು ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಆಯುಶ್ ನಿರ್ದೇಶನಾಲಯ, ತಾಲೂಕು ಸೋಮನಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಜಿಪ ಹಾಗೂ ತಾಪ ಸಂಯೋಜನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಯಳ್ಳಂಬಳಸೆ ಜಿಪಂ ಸದಸ್ಯ ಶಶಿರೇಖಾ ಎಂ. ಆರ್.ಟಿ. ಸುರೇಶ್ ಉಧ್ಘಾಟಿಸಿ ಮಾತನಾಡಿ, ಮನೆಯಲ್ಲಿರುವ ದಿನಬಳಕೆ ವಸ್ತುಗಳಿಂದಲೇ ಮನೆಮದ್ದು ಮಾಡಿ ರೋಗಗಳಿಂದ ಮುಕ್ತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಸ್ತವೃತದ ಕಾರ್ಯಕ್ರಮಗಳು ಜನರಿಗೆ ಉಪಯೋಗಿಯಾಗಿವೆ. ಹಿರಿಯರು ಇಂತಹ ಮನೆಮದ್ದಿನಿಂದ ತಮ್ಮ ಹಾಗೂ ಮಕ್ಕಳ ಆರೋಗ್ಯ ಕಾಪಾಡುವತ್ತ ನಿಗಾ ವಹಿಸುತ್ತಿದ್ದರು ಎಂದರು. ಗ್ರಾಪಂ ಅಧ್ಯಕ್ಷೆ ಹಾಲಮ್ಮ ದೇವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಬಸವರಾಜಪ್ಪ, ಜಯಣ್ಣ ಇದ್ದರು.
ಅಭಿನಂದನೆ
ಕಡೂರು: ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕಿನ ಮಹಾಕವಿ ಲಕ್ಷ್ಮೀಶನ ಜನ್ಮಸ್ಥಳ ದೇವನೂರಿನಲ್ಲಿ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾ. 8 ಹಾಗೂ ಡಿ 9 ರಂದು ಎರಡು ದಿನಗಳ ಕಾಲ ನಡೆದಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡದ ಎಲ್ಲ ಮನಸ್ಸುಗಳಿಗೆ ಹಾಗೂ ಕಡೂರು ತಾಲೂಕಿನ ಎಲ್ಲ ಕಸಾಪ ಪದಾಧಿಕಾರಿಗಳಿಗೆ, ಸರ್ವ ಸದಸ್ಯರಿಗೆ, ದೇವನೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ, ದೇವನೂರು ಲಕ್ಷ್ಮೀಶ ಶಾಲೆ ಮತ್ತ್ತುವಾಗ್ದೇವಿ ಶಾಲೆಯ ಮಕ್ಕಳಿಗೆ ಹಾಗು ಕಡೂರು ತಾಲೂಕಿನ ಜನತೆಗೆ ಅಭಿನಂದನೆಗಳನ್ನು ತಿಳಿಸಿರುವ ಕಡೂರು ತಾಲೂಕು ಕಸಾಪ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

