ಚಿಕ್ಕಮಗಳೂರು

ಇಂದು ಸಿದ್ದೇಶ್ವರ ರಥೋತ್ಸವ

Published On :

ನರಸಿಂಹರಾಜಪುರ: ತಾಲೂಕಿನ ಗಡಿಭಾಗದ ಸಿದ್ದರಮಠದಲ್ಲಿ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮವು ಮಾ.27ರಂದು ಬುಧವಾರ ನಡೆಯಲಿದೆ ಎಂದು ಸಿದ್ದರಮಠ ದೇವಸ್ಥಾನದ ಊರುಗುಡಿಗೆ ಸತೀಶ್ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ರಥೋರೋಹಣ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಬಸವನ ಕಟ್ಟೆಯವರೆಗೆ ರಥೋತ್ಸವ, ನಂತರ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಗುರುವಾರ ಯಕ್ಷಗಾನ: ಗುರುವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಸೀತೂರು ವಿನಾಯಕ ಯಕ್ಷಗಾನ ಕಲಾ ಮಂಡಳಿಯವರಿಂದ ಯಕ್ಷಗಾನ ನಡೆಯಲಿದೆ. ನಂತರ ಪಲ್ಲಕ್ಕಿ ಉತ್ಸವ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಭಕ್ತರು ಎರಡು ದಿನಗಳ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
31ರಂದು ಮಹಾರುದ್ರಹೋಮ
ಶೃಂಗೇರಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಿಗ್ಗಾ ಶ್ರೀ ಶಾಂತಾ ಋಷ್ಯ ಶೃಂಗೇಶ್ವರ ದೇವಾಲಯದಲ್ಲಿ ಮಾ.31ರಂದು ಮಹಾರುದ್ರ ಹೋಮ ನಡೆಯಲಿದೆ. ಇದರ ಅಂಗವಾಗಿ 30ರಿಂದ ಶಾಲಾ ಪ್ರವೇಶ,ಪುರಶ್ಚರಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ.
ಕೆಜೆಪಿಗೆ ರಾಜಿನಾಮೆ
 ಮೂಡಿಗೆರೆ, ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಸಹಿತ ಎಂಟು ಮಂದಿ ಪದಾಧಿಕಾರಿಗಳು ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆಯನ್ನು ಜಿಲಾಧ್ಯಕ್ಷರಿಗೆ ಸಲ್ಲಿಸುವುದರ ಮೂಲಕ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ ತಿಳಿಸಿದ್ದಾರೆ.
   ಕೆಜೆಪಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆದರ್ಶ ಕೊಟ್ಟಿಗೆಹಾರ,
  ಮೂಡಿಗೆರೆ ತಾಲೂಕು ಕೆಜೆಪಿ ಅಧ್ಯಕ್ಷ ನಾಗರಾಜ್ ಬಾಳೇಹಲ್ಳಿ, ನಗರ ಯುವ ಘಟಕದ ಅಧ್ಯಕ್ಷ ಮದನ್ ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ವಿಶಾಲ ನಾಗರಾಜ್, ತಾಲೂಕು ಯುವ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲ ನಾಗರಾಜ್, ತಾಲೂಕು ಯುವ ಘಟಕದ ಉಪಾಧ್ಯಕ್ಷ ಹೇಮಂತ್ ತಳವಾರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರಬ್ಬ, ಉಪಾಧ್ಯಕ್ಷ ಹಂಡುಗುಳಿ ಮುಹಮ್ಮದ್ ಅಲಿ, ಯುವ ಘಟಕದ ಕಾರ್ಯದರ್ಶಿ  ರೋಹಿತ್ ಯರಗುಡ್ಡೆ ರಾಜಿನಾಮೆ ನೀಡಿದವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.