ಮತದಾರರಿಂದ ಜೆಡಿಎಸ್‌ಗೆ ಬೆಂಬಲ
ಮೂಡಿಗೆರೆ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ ಭ್ರಷ್ಟ ಆಡಳಿತದ ಬಗ್ಗೆ ಮತದಾರರು ಬೇಸತ್ತಿದ್ದು, ಈ ಬಾರಿ ಜೆಡಿಎಸ್ ಬೆಂಬಲಿಸುವರು ಎಂದು ಕ್ಷೇತ್ರ ಸಮಿತಿಯ ಅಧ್ಯಕ್ಷ ಡಿ.ಆರ್. ಉಮಾಪತಿ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು. ಪಪಂ 11 ವಾರ್ಡ್‌ಗಳ ಚುನಾವಣೆ ನಡೆದಿದ್ದು, 10 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಕುತಂತ್ರ, ಮತದಾರರನ್ನೇ ಭ್ರಷ್ಟರನ್ನಾಗಿಸಿ ಮತ ಪಡೆಯುವಲ್ಲಿ ಯಶಸ್ವಿಯಾಗಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. ಮಾ. 29ರ ಶುಕ್ರವಾರದಂದು ಕೆ.ಎಂ. ರಸ್ತೆಯಲ್ಲಿರುವ ಸಿಂಧು ಟವರ್ಸ್‌ನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ರಂಜನ್ ಅಜೀತ್ ಕುಮಾರ್ ತಮ್ಮ ಬೆಂಬಲಿಗರೊಂದಿಗೆ ಅಧಿಕೃತ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದರು. ಜೆಡಿಎಸ್ ನೂತನ ಕಚೇರಿಯನ್ನು ರಾಜ್ಯ ಸಮಿತಿ ಸದಸ್ಯ ಎಂ.ಎಸ್. ಬಾಲಕೃಷ್ಣ ಮತ್ತು ಜಿಲ್ಲಾಧ್ಯಕ್ಷ ಮಂಜಪ್ಪ ಉದ್ಘಾಟಿಸದ್ದಾರೆ ಎಂದರು. ರಾಜ್ಯ ಸಮಿತಿ ಸದಸ್ಯ ಎಂ.ಎಸ್. ಬಾಲಕೃಷ್ಣ, ಕಣಚೂರ್ ರಾಜೇಂದ್ರ, ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ಪಿ. ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಸ್ಪರ್ಧೆ
ತರೀಕೆರೆ: ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವುದಾಗಿ ಜಮದಗ್ನಿ ಪತ್ರಿಕೆ ಸಂಪಾದಕ ಎ.ಆರ್.ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಳೆದ 23 ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು, ಬಡಜನರ ಪರ ಹೋರಾಟ, ನಿವೇಶನಕ್ಕೆ, ಕುಡಿಯುವ ನೀರಿಗಾಗಿ ಹೋರಾಟ, ಮೂಲ ಸೌಲಭ್ಯದಲ್ಲಿ ವಂಚನೆಯಾಗಿರುವ ಬಡಜನರ ಪರ ಹೋರಾಟ ಮಾಡುತ್ತಾ ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಸಚಿವರ ಹೆಸರಿನ ನಾಮಫಲಕ ಮರೆ
ನರಸಿಂಹರಾಜಪುರ: ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಫಲವಾಗಿ ಸಚಿವ ಡಿ.ಎನ್. ಜೀವರಾಜ್ ನೀಡಿರುವ ಅನುದಾನದ ಹಲವು ಕಾಮಗಾರಿಗಳ ನಾಮಫಲಕಗಳ ಮೇಲೆ ಬಟ್ಟೆ ಮುಚ್ಚಲಾಗಿದೆ. ಮುಖ್ಯವಾಗಿ ಶಾಸಕರ ಕಚೇರಿಯಲ್ಲಿ ನೂತನವಾಗಿ ಬರೆಸಿದ್ದ ಸಚಿವರ ಹೆಸರಿನ ನಾಮಫಲಕ, ತಾಲೂಕು ಪಂಚಾಯ್ತಿಯ ಆವರಣದಲ್ಲಿದ್ದ ಜಾಹೀರಾತು ಫಲಕ, ಹಳೇ ಪೇಟೆಯ ಬಸ್ಸು ನಿಲ್ದಾಣದ ನಾಮ ಫಲಕ, ಪಟ್ಟಣ ಪಂಚಾಯ್ತಿ ಎದುರು ಇದ್ದ ಬಸ್ಸು ನಿಲ್ದಾಣದ ನಾಮ ಫಲಕ, ಬಸ್ಸು ನಿಲ್ದಾಣದ ಸಮೀಪದ ಆಟೋ ಸ್ಟಾಂಡಿನ ನಾಮ ಫಲಕಗಳಿಗೆ ಬಿಳಿ ಬಟ್ಟೆ ಮುಚ್ಚಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

