ಚಿಕ್ಕಮಗಳೂರು

ಅಭಿವೃದ್ಧಿ ಕೆಲಸಗಳೇ ಪಕ್ಷಕ್ಕೆ ಶ್ರೀರಕ್ಷೆ: ಸುರೇಶ್

Published On :

ಕ.ಪ್ರ ವಾರ್ತೆ, ತರೀಕೆರೆ, ಮಾ.30
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ವಹಿಸಿದ ಅಭಿವೃದ್ಧಿ ಕೆಲಸಗಳೇ ಪಕ್ಷಕ್ಕೆ ಬಹುದೊಡ್ಡ ಶ್ರೀರಕ್ಷೆ ಎಂದು ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಅವರು ಸಮೀಪದ ಲಕ್ಕವಳ್ಳಿ ಮಹಾಗಣಪತಿ ಪೆಂಡಾಲಿನಲ್ಲಿ ಏರ್ಪಾಡಾಗಿದ್ದ ಲಕ್ಕವಳ್ಳಿ ಹೋಬಳಿ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಐದು ವರ್ಷದಲ್ಲಿ ತರೀಕೆರೆ ತಾಲೂಕಿನಾದ್ಯಂತ ಗುಣಮಟ್ಟದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು
ನಿರ್ವಹಿಸಲಾಗಿದೆ. ಕಾಂಕ್ರಿಟ್ ರಸ್ತೆ, ಸಮುದಾಯ ಭವನ, ನೂತನ ಶಾಲಾ ಕಟ್ಟಡಗಳ ನಿರ್ಮಾಣ, ಸುವರ್ಣ  ಗ್ರಾಮ ಯೋಜನೆ ಇತ್ಯಾದಿ ಪ್ರಗತಿಪರ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಲಕ್ಕವಳ್ಳಿ ಹೋಬಳಿ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ, ಸೋಂಪುರದಲ್ಲಿ ರು. 1 ಕೋಟಿ ವೆಚ್ಚದಲ್ಲಿ ಯಾತ್ರಿಕರ  ನಿವಾಸ ನಿರ್ಮಾಣ ಕಾರ್ಯ, ರು. 85 ಲಕ್ಷಗಳಲ್ಲಿ ಸೇತುವೆ ನಿರ್ಮಾಣ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸಲು ಕೆಜೆಪಿ ಪಕ್ಷಕ್ಕೆ ಮತ ನೀಡಿ ತಮ್ಮನ್ನು ಗೆಲ್ಲಿಸಿ ಎಂದು ಮನವಿ ಮಾಡಿದ ಅವರು, ಕಾರ್ಯಕರ್ತರು ಕೆಜೆಪಿ ಪಕ್ಷದ ಗುರುತನ್ನು ಜನರಿಗೆ ಮುಟ್ಟಿಸಬೇಕೆಂದು ಕೋರಿದರು.
ಕೆಜಿಪಿ ಪಕ್ಷದ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಬಿಎಸ್ವೈ ರಾಜ್ಯಾದ್ಯಂತ ಕೈಗೊಳ್ಳುತ್ತಿದ್ದ ಅಭಿವೃದ್ಧಿ
ಕಾರ್ಯಗಳನ್ನು ಮತ್ತು ಅವರ ಏಳಿಗೆ ಕಂಡು ಸಹಿಸಲಾರದೆ ಹೋದರು. ಇದರಿಂದ ಮನನೊಂದ ಬಿ.ಎಸ್.ವೈ
ಹೊಸ ಪ್ರಾದೇಶಿಕ ಪಕ್ಷ ಕಟ್ಟಿದರು. ಕೆಜೆಪಿ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಲಕ್ಕವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಸಂಜೀವ್ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿದರು.
ದಾದಾಪೀರ್, ಮಹಮದ್  ಯೂಸುಫ್, ಟಿ.ಜಿ. ಮಂಜುನಾಥ್, ನಾಗರತ್ನಮ್ಮ, ರಘು, ಪಕ್ಷದ ಕಾರ್ಯಕರ್ತರು ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.