ಏ.2ರಂದು ಶರಣ ಸಂಸ್ಕ ೃತಿ ಮಹಾಯಾತ್ರೆ
ಕ.ಪ್ರ ವಾರ್ತೆ, ಕಡೂರು, ಮಾ.30
ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಏ.2ರಂದು ಚಿಕ್ಕಮಗಳೂರಿಗೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ತಿಳಿಸಿದರು.
ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿ ಮತ್ತು ವಿವಿಧ ಸಂಘಟನೆಗಳ ಆಯೋಜನೆಯಲ್ಲಿ ರಾಜ್ಯದ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುತ್ತಿರುವ ಶರಣ ಸಂಸ್ಕೃತಿ ಮಹಾಯಾತ್ರೆಗೆ ಕಳೆದ ಮಾ.13ರಂದು ಬಸವನ ಬಾಗೇವಾಡಿಯಿಂದ ಚಾಲನೆ ನೀಡಲಾಗಿದೆ.
33 ದಿನಗಳ ಈ ಮಹಾಯಾತ್ರೆ 4850 ಕಿ.ಮೀ ದೂರ ಕ್ರಮಿಸುವ ಮೂಲಕ ಶರಣ ಸಂಸ್ಕೃತಿಯ ಜೊತೆ ಬಸವಾದಿ ಶರಣರ ಜೀವನದ ನಿಜ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಸವ ಸಮಿತಿ ಸಂಸ್ಥಾಪಕ ಡಾ.ಬಿ.ಡಿ. ಜತ್ತಿ 1966ರಲ್ಲಿ ಹಂಪಿಯಿಂದ ಬಸವ ಕಲ್ಯಾಣದವರೆಗೆ ಪಾದಯಾತ್ರೆ ಮಾಡಿ ಸಮಾಜದಲ್ಲಿ ಜಾಗೃತಿ ಅರಿವು ಮೂಡಿಸಿದ 100 ವರ್ಷಗಳ ತರುವಾಯ ಈ ಶರಣ ಸಂಸ್ಕೃತಿ ಮಾಹಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಸಭೆ: ಈ ಹಿನ್ನೆಲೆಯಲ್ಲಿ ಏ.2ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಯಾತ್ರೆ ಉಜಿರೆಯಿಂದ ಮೂಡಿಗೆರೆಗೆ ಬರುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶ ಮಾಡಲಿದೆ. ಜಿಲ್ಲೆಯ ಎಲ್ಲಾ ಮಠಾಧೀಶರು ಮತ್ತು ಎಲ್ಲ ಸಮುದಾಯದ ಮುಖಂಡರ ನೇತೃತ್ವದಲ್ಲಿ ಯಾತ್ರೆ ಬರಮಾಡಿಕೊಳ್ಳಲಾಗುವುದು. 11.30ಕ್ಕೆ ಚಿಕ್ಕಮಗಳೂರು ನಗರಕ್ಕೆ ಪುರಪ್ರವೇಶದ ನಂತರ ಸಾರ್ವಜನಿಕ ಸಭೆ ನಡೆಯಲಿದೆ. 12.30ಕ್ಕೆ ಸಖರಾಯಪಟ್ಟಣ ತಲುಪಿ 1.30ಕ್ಕೆ ಕಡೂರು ಪಟ್ಟಣಕ್ಕೆ ಆಗಮಿಸಲಿದೆ.
ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಎಚ್.ವಿ. ಗಿರೀಶ್ ಮಾತನಾಡಿ, 33 ದಿನದ ಈ ಮಾಹಾಯಾತ್ರೆಯಲ್ಲಿ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿಯವರು ಇರಲಿದ್ದು ಬಸವಣ್ಣನವರನ್ನು ನೆನೆದು ಜೀವನದ ಮೌಲ್ಯಗಳ ಜಾಗೃತಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ತುರುವನಹಳ್ಳಿ ರೇಣುಕಯ್ಯ, ಬೀರೂರು ಜಗದೀಶ್, ಪಿ.ಕೆ. ರೇವಣ್ಣಯ್ಯ, ಡಾ. ಶಶಿಕಲಾ, ಲತಾ, ದೇವರಾಜ್, ತರೀಕೆರೆ ಪಂಕಜ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

