ಚಿಕ್ಕಮಗಳೂರು

ಬಸ್ ಸಂಚಾರ ವ್ಯತ್ಯಯ: ಸಹಕರಿಸಲು ಮನವಿ

Published On :

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಸಕಲೇಶಪುರ, ಅರಸೀಕೆರೆ ಮತ್ತು ಬೇಲೂರು ತಾಲ್ಲೂಕುಗಳ ವಿಭಾಗದ ವ್ಯಾಪ್ತಿಯಲ್ಲಿ  275 ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 4 ರಿಂದ ಮೇ 6 ರವರೆಗೆ ಕೆಎಸ್ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತೆ ನಿಷೇಧ
ವಿಧಾನಸಭಾ ಚುನಾವಣೆ ಸಂಬಂಧ ಮೇ 8ರ ಬುಧವಾರ ನಡೆಯುವ ಸಂತೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ನಿಷೇಧಿಸಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ಕೆಜೆಪಿ ಅಭ್ಯರ್ಥಿ ಮತಯಾಚನೆ
ತರೀಕರೆ: ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ ಶುಕ್ರವಾರ ತಮ್ಮ ಬೆಂಬಲಿಗರೊಡನೆ ರೋಡ್ಶೋ ನೆಡೆಸುವುದರ ಮೂಲಕ ಪಟ್ಟಣದಲ್ಲಿ ಮತಯಾಚನೆ ನೆಡೆಸಿದರು. ಸೈಯದ್ ಖಾಸಿಂ, ಮಿಲ್ಟ್ರಿ ಶ್ರೀನಿವಾಸ್, ಜಿ.ಸಿ.  ಸತೀಶ್ಕುಮಾರ್ ಟಿ.ಕೆ. ರಮೇಶ್, ದಾದಪೀರ್, ಜಿಯಾವುಲ್ಲಾ, ಟಿ.ಜಿ. ಮಂಜುನಾಥ್ ಮತ್ತು ಪಕ್ಷದ ಕಾರ್ಯಕರ್ತರೊಡನೆ ರೋಡ್ಶೋ ನೆಡೆಸಿ ಮತಯಾಚಿಸಿದರು.
ಮತದಾರರಿಗೆ ಮತ
ಚೀಟಿ ವಿತರಣೆ
ತರೀಕೆರೆ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೋಟರ್ ಸ್ಪಿಪ್ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಬಿಎಲ್ಒಗಳು ಪ್ರತಿ ಮನೆಗೆ ವೋಟರ್ ಸ್ಲಿಪ್ ತಲುಪಿಸುತ್ತಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರಂಜಿತ
ತಿಳಿಸಿದ್ದಾರೆ.
 ಮತದಾರರು ಬಿಎಲ್ಒಗಳು ನೀಡುವ ವೋಟರ್ ಸ್ಪಿಪ್ಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ, ಓಟರ್ ಸ್ಲಿಪ್ಗಳು ತಲುಪದವರು ಚುನಾವಣಾ ಆಯೋಗ ತಿಳಿಸಿರುವ 23 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದು. ಬಿಎಲ್ಒಗಳು ಮತದಾನದ ದಿನದಂದು ಮತಗಟ್ಟೆಯಲ್ಲಿಯೇ ಉಪಸ್ಥಿತರಿದ್ದು, ವೋಟರ್ ಸ್ಲಿಪ್ಗಳನ್ನು ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಮತದಾರರು ಮತದಾನದ ದಿನದಂದೂ ಓಟರ್ ಸ್ಲಿಪ್ಗಳನ್ನು ಪಡೆದು
ಮತದಾನ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.