ಚಿಕ್ಕಮಗಳೂರು

ಬಿಗಿ ಬಂದೋಬಸ್ತ್ ನಡುವೆ ಮತದಾನ

Published On :

ಶಿರಾಳಕೊಪ್ಪ: ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚುನಾವಣೆ ಶಾಂತ ರೀತಿಯಿಂದ ನಡೆಯಿತು.
 ಚುನಾವಣಾ ಆಯೋಗದ ಬಿಗಿ ನಿರ್ಧಾರದಿಂದ ಈ ಹಿಂದೆ ಒಂದಿಲ್ಲ ಒಂದು ಕಾರಣಕ್ಕೆ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಕೆಲಭಾಗದಲ್ಲಿ ಪ್ರತಿ ಚುನಾವಣೆಯಲ್ಲಿ ನಡೆಯುತ್ತಿದ್ದ ಗಲಾಟೆಗಳು ಈ ಬಾರಿ ನಡೆಯದೇ ಶಾಂತರೀತಿಯಿಂದ ಮತದಾನ ನಡೆದಿರುವದು ಈ ಭಾಗದ ಮತದಾರರಿಗೆ ನೆಮ್ಮದಿ ತಂದಿದೆ.
ಹೆಸರು ನಾಪತ್ತೆ: ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಈ ಹಿಂದೆ ನಡೆದಂತೆ ಮತಪಟ್ಟಿಯಲ್ಲಿ ಹೆಸರು ನಾಪತ್ತೆಯ ಪ್ರಕಣಗಳು ಸಾಕಷ್ಟು ಕೇಳಿ ಬಂದಿವೆ. ಮತದಾರಪಟ್ಟಿಯಲ್ಲಿ ಹೆಸರು ಮತ್ತು ಪೋಟೋ ಅದಲು ಬದಲು ಸಾಕಷ್ಟ ಗೊಂದಲಕ್ಕೆ ಕಾರಣವಾಗಿದ್ದರೂ ಮತದಾನಕ್ಕೆ ತೊಂದರೆ ಆಗಲಿಲ್ಲ. ಶಿರಾಳಕೊಪ್ಪ ಪಟ್ಟಣದಲ್ಲಿ ಕೆಲವು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಈ ಹಿಂದೆ ಗುರುತಿಸಲಾಗಿತ್ತು, ಅಂತಹ ಮತಗಟ್ಟೆಗಳಲ್ಲಿ ಬಿಗಿ ಪೋಲೀಸ್ಬ್‌ಂದೋಬಸ್ತ ಜೊತೆಗೆ ಅರೆಸೇನಾಪಡೆ ಹಾಕಲಾಗಿತ್ತು. ಮತದಾರರನ್ನು ಬಿಟ್ಟು  ಇತರರನ್ನು ಹತ್ತಿರ ನಿಲ್ಲದಂತೆ ಹಾಗು ಗುಂಪುಸೇರದಂತೆ ಸ್ಥಳೀಯ ಪೋಲೀಸರು ಎಚ್ಚರಿಕೆ ವಹಿಸಿದ ಕಾರಣ ಯಾವದೇ ಅಹಿತಕರ ಘಟನೆಗೆ ಆಸ್ಪದವಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.