ಮಕ್ಕಳಲ್ಲಿ ಪರೋಪಕಾರ ಗುಣ ಬೆಳೆಸಿ: ಬಸವೇಗೌಡ
ಚಿಕ್ಕಮಗಳೂರು: ಪರೋಪಕಾರ, ತ್ಯಾಗ, ಶಿಸ್ತು, ಸೇವಾ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಲು ಡಾ. ಹರ್ಡೀಕರ್ ಆರಂಭಿಸಿದ ಮಹತ್ವದ ಆಂದೋಲನ ಸೇವಾದಳ ಎಂದು ಡಯಟ್ ಪ್ರಾಂಶುಪಾಲ ಬಸವೇಗೌಡ ಹೇಳಿದರು.
ಆಜಾನ್ ಪ್ಯಾರ್ಕ್ ಸ.ಹಿ.ಪ್ರಾ. ಕನ್ನಡ ಶಾಲೆಯ ಜ್ಞಾನಜ್ಯೋತಿ ಸೇವಾದಳ ಘಟಕ ಮಂಗಳವಾರ ಆಯೋಜಿಸಿದ್ದ ಡಾ. ನಾ.ಸು. ಹರ್ಡೀಕರ್ ಜನ್ಮದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದವರೇ ಆದ ಹರ್ಡೀಕರ್ ಮೂಲತಃ ವೈದ್ಯರು. ಅವರು ಮಕ್ಕಳಲ್ಲಿ ನೈತಿಕ ಮೌಲ್ಯ, ಜಾತ್ಯತೀತ ಮನೋಭಾವ, ಸಹ ಜೀವನ, ಸಹಬಾಳ್ವೆ, ದೇಶಪ್ರೇಮ ರೂಢಿಸಲು ಸೇವಾದಳದ ಮೂಲಕ ಪ್ರಯತ್ನಿಸಿದರು. ಸಮಾಜದ ಅನಿಷ್ಟ ಪದ್ಧತಿ ತೊಡೆದುಹಾಕಲು, ಉಪಯುಕ್ತ ಸೇವಾ ಕಾರ್ಯ ಮಾಡಲು ಮಕ್ಕಳನ್ನು ಪ್ರಚೋದಿಸಿದವರು ಎಂದ ಬಸವೇಗೌಡ, ಸಾವಿರಾರು ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಶಿಸ್ತಿನಿಂದ ಸಾಧನೆ ಸಾಧ್ಯ: ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಎನ್.ಎಸ್. ಜಗದೀಶ್ವರಾಚಾರ್ ಮಾತನಾಡಿ, ಜೀವನದಲ್ಲಿ ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಂಡರೆ ಒಳ್ಳೆಯ ಸಾಧನೆ ಮಾಡಬಹುದು. ಸೇವಾದಳ ಶಿಸ್ತು, ದೇಶಭಕ್ತಿಯನ್ನು ಕಲಿಸುವ ಮಹತ್ವದ ಸಂಘಟನೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ವರಪ್ಪ ಮಾತನಾಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಸರಳ ಜೀವನ ಉದಾತ್ತ ಚಿಂತನೆಗೆ ಹರ್ಡೀಕರ್ ಉದಾಹರಣೆಯಾಗಿದ್ದಾರೆ. ಬರವಣಿಗೆ ಮೂಲಕ ಜನಜಾಗೃತಿ ಮಾಡಿದವರು. ಸ್ವಾತಂತ್ರ್ಯದ ಜೊತೆಗೆ ಸಮಾಜ ಕಟ್ಟುವ ಕೆಲಸಕ್ಕೂ ಆದ್ಯತೆ ನೀಡಿ, ಬೆಳೆಯುವ ಮಕ್ಕಳಲ್ಲಿ ಮೌಲ್ಯ ತುಂಬುವ ಆದರ್ಶ ಹೋರಾಟಗಾರರು ಎಂದರು. ಶಾಲಾ ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿ ತೇಜಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

