ಶೃಂಗೇರಿ ಕ್ಷೇತ್ರದ ಮತದಾರ ಅಭಿವೃದ್ಧಿಗೆ ಮತ ನೀಡಿದ್ದಾನೆ: ಜೀವರಾಜ್ ಅಭಿಮತ
ಕೊಪ್ಪ: ಶೃಂಗೇರಿ ಕ್ಷೇತ್ರದ ಪ್ರಬುದ್ಧ ಮತದಾರ ಅಪಪ್ರಚಾರ ನಂಬದೆ, ಮತ ಮಾರಿಕೊಳ್ಳದೇ ಅಭಿವೃದ್ಧಿಗೆ ಮತ ನೀಡಿರುವುದು ಅಭಿನಂದಾರ್ಹ ಎಂದು ಶಾಸಕ ಡಿ.ಎನ್. ಜೀವರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧಿಗಳ ಅಪಪ್ರಚಾರ ಮತ್ತು ಅವರ ಹಣದ ಶಕ್ತಿಯನ್ನು ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಮತ್ತು ಅಭಿವೃದ್ಧಿಯ ಮಂತ್ರ ಹೊಡೆದುಹಾಕಿದೆ. ವಿರೋಧಿಗಳು ಚುನಾವಣೆಯ ಪ್ರಚಾರ ಭಾಷಣದಲ್ಲಿ ಅಸಹ್ಯವಾಗಿ ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಮಾತನಾಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದರಿಂದ ಪ್ರಬುದ್ದ ಮತದಾರರು ಬೇಸತ್ತು ಬಿಜೆಪಿ ಮತ ನೀಡಿ ಗೆಲ್ಲಿಸಿದ್ದಾರೆ.
ಹಿಂದೆ 2004ರ ಚುನಾವಣೆ ನಂತರ 20 ತಿಂಗಳು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಿದ ಅನುಭವವಿದೆ. ಆದ್ದರಿಂದ ಕ್ಷೇತ್ರದ ಹೆಸರಿಗೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ಮುಟ್ಟಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಜಿಲ್ಲೆಯಲ್ಲಿ ಹಾಲಿನ ಡೈರಿ ಸ್ಥಾಪನೆ ವಿಚಾರವಾಗಿ ಜಿಲ್ಲೆಯ 5 ಜನ ಶಾಸಕರು ಒಟ್ಟುಗೂಡಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಮೂಲಕ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಒಂದುಗೂಡಿ ಕೆಲಸ ಮಾಡುತ್ತೇವೆ ಎಂದರು.
ಕ್ಷೇತ್ರದ ಎಲ್ಲಾ ಗುರುಗಳ ಆರ್ಶೀವಾದದಿಂದ ಜಯಗಳಿಸಿದ್ದೇನೆ. ನನ್ನ ರಾಜಕೀಯ ಗುರುಗಳಾದ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದಗೌಡರ ಆರ್ಶೀವಾದವನ್ನು ಪಡೆದು ನಂತರ ಹರಿಹರಪುರ ಶ್ರೀಗಳ ಆಶೀರ್ವಾದ ಮತ್ತು ನಾರ್ವೆ ನಾಗೇಂದ್ರ ಭಟ್ಟರ ಆರ್ಶೀವಾದ ಪಡೆದು ಕೊಳ್ಳಲು ತೆರಳುತ್ತಿದ್ದೇನೆ ಎಂದರು. ಗೋಷ್ಠಿಯಲ್ಲಿ ಎಸ್.ಎನ್. ರಾಮಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಮಹಬಾಲರಾವ್, ಬಿಜೆಪಿ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಹೊಸೂರು ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
--
ತರೀಕೆರೆಯಲ್ಲಿ ಕಾಂಗ್ರೆಸ್ ಬೈಕ್ ರ್ಯಾಲಿ
ತರೀಕೆರೆ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಿದ ಹಿನ್ನಲೆಯಲ್ಲಿ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪುರಸಭಾ ಸದಸ್ಯರು ಪಟಾಕಿ ಸಿಡಿಸಿ ಬೈಕ್ ರ್ಯಾಲಿ ನೆಡೆಸಿದರು.
ಪುರಸಭಾ ಸದಸ್ಯ ಬಿ.ವಿ. ಪದ್ಮರಾಜ್, ಪ್ರಕಾಶ್ ವರ್ಮ, ಟಿ.ಜಿ. ಅಶೋಕ್ಕುಮಾರ್, ರಮೇಶ್, ನಾಗರಾಜ್, ರವಿಕುಮಾರ್, ಗಂಗಾಧರ್, ಟಿ.ಜಿ. ಶಶಾಂಕ್, ಅಣ್ಣಯ್ಯ, ಮಲಿಯಪ್ಪ, ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

