ಚಿಕ್ಕಮಗಳೂರು

ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ

Published On :

ಮೂಡಿಗೆರೆ: ಮೂಡಿಗೆರೆ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾದವರ ಮೇಲೆ ನೇರ ಕ್ರಮ ಜರುಗಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಪತ್ರಿಕೆಗಳಲ್ಲಿ ತಾನು ಕೆಲವರ ವಿರುದ್ಧ ನೇರವಾದ ಆರೋಪಗಳನ್ನು ಮಾಡಿರುವಂತೆ ಬಿಂಬಿತವಾಗಿದ್ದು.
ತಾನು ಸಮನ್ವಯ ಸಮಿತಿ ಮತ್ತು ಬ್ಲಾಕ್ ಅಧ್ಯಕ್ಷರು, ಪಧಾದಿಕಾರಿಗಳ ನಡುವೆ ಸಮನ್ವಯತೆ ಸಾಧಿಸದಿರುವುದರಿಂದ ಸೋಲಿಗೆ ಕಾರಣವಾಗಿರುವ ಬಗ್ಗೆ ತೆರದಿಟ್ಟಿದ್ದೆನಾದರೂ ಇಂಥವರೇ ಕಾರಣರು ಎನ್ನುವುದಕ್ಕೆ ಯಾವುದೆ ದಾಖಲೆಗಳಿಲ್ಲ ಹಾಗೂ ಕಾಂಗ್ರೆಸ್ ಮುಖಂಡರ ಮತ್ತು ನಾಯಕರ ವಿರುದ್ಧ ವ್ಯಕ್ತಿಗತ ಆರೋಪವನ್ನು ಮಾಡಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಸ್ಪಷ್ಟನೆ ನೀಡಿದರು.
ಅಲ್ಲದೇ ಸೋಲಿನ ಹೊಣೆ ಹೊರಲು ತಾನು ನೈತಿಕವಾಗಿ ಸಿದ್ಧನಿದ್ದೇನೆ. ಆದರೆ ಮೂರು ಬ್ಲಾಕ್ ಹೊಂದಿರುವ ಕ್ಷೇತ್ರ ಇದಾಗಿರುವುದರಿಂದ ನನ್ನೊಬ್ಬನನ್ನೇ ಹೊಣೆಗಾರನನ್ನಾಗಿ ಮಾಡುವುದು ಸರಿಯಲ್ಲ. 2 ಹೋಬಳಿಗಳು ಇರುವ ಮೂಡಿಗೆರೆ ಕ್ಷೇತ್ರದಲ್ಲಿ ನನ್ನ ವ್ಯಾಪ್ತಿಗೆ ಕೇವಲ ಮೂರು ಹೋಬಳಿಗಳು ಮಾತ್ರವಿದೆ. ಅವುಗಳಲ್ಲಿ ಬಣಕಲ್ ಮತ್ತು ಕಸಬಾ ಹೋಬಳಿಗಳು ಕಾಂಗ್ರೆಸ್‌ಗೆ ಲೀಡ್ ಕಟ್ಟಿದೆ. ಗೋಣಿಬೀಡು ಹೋಬಳಿ ಮಾತ್ರ ತಮ್ಮ ಕೈಯಿಂದ ಜಾರಿದ್ದು, ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮನೋಜ್ ಬೆಟ್ಟಗೆರೆ ಮತ್ತು ಮೈದೀನ್ ಶೇಠ್ ಬಳಗುಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.