ಶುದ್ಧ-ಸ್ವಚ್ಛ ಆಹಾರ ನೀಡಲು ನಗರಸಭೆ ಕಟ್ಟು ನಿಟ್ಟಿನ ಸೂಚನೆ
ಕಪ್ರವಾರ್ತೆ,ಚಿಕ್ಕಮಗಳೂರು,ಮೇ16
ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು, ಶುದ್ಧ-ಸ್ವಚ್ಛ ಆಹಾರ ಪದಾರ್ಥಗಳನ್ನು ನೀಡಲು ಹಾಗೂ ಹೋಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ನಗರಸಭೆ ಸೂಚನೆ ನೀಡಿದೆ.
ಸಾರ್ವಜನಿಕರಿಂದ ಈ ಬಗ್ಗೆ ಅನೇಕ ದೂರುಗಳು ಬಂದಿದ್ದು, ಹೋಟೆಲ್ ಮಾಲೀಕರು ಎಚ್ಚರವಹಿಸಬೇಕು. ನಗರಸಭೆ ಸಿಬ್ಬಂದಿಗಳು ಎಲ್ಲಾ ಹೋಟೆಲ್ಗಳನ್ನು ಪರಿಶೀಲನೆ ಮಾಡಲಿದ್ದು, ನ್ಯೂನ್ಯತೆ ಕಂಡುಬಂದರೆ ಹೋಟೆಲ್ಗಳ ಪರಾವಾನಗಿ ರದ್ದು ಪಡಿಸುವುದಲ್ಲದೆ 500 ರಿಂದ 1000 ಗಳವರೆಗೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನಲ್ಲಿ ಸಂಪರ್ಕ ಪಡೆಯಲು ಸೂಚನೆ: ಸರ್ಕಾರದ ಆದೇಶ ಅನ್ವಯ ಪ್ರತಿ ಕುಟುಂಬಗಳು ವಾಸಿಸುವ ಕಟ್ಟಡಗಳಿಗೆ ವೈಯಕ್ತಿಕ ನಲ್ಲಿ ಸಂಪರ್ಕ ಕಡ್ಡಾಯವಾಗಿದೆ.
ಸಾರ್ವಜನಿಕ ನಲ್ಲಿಗಳಿಗೆ ಅವಲಂಭಿತವಾಗಿರುವ ಕುಟುಂಬಗಳು 15 ದಿನದೊಳಗಾಗಿ ನಗರಸಭೆಗೆ ಸಕಾಲ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ನಲ್ಲಿ ಸಂಪರ್ಕ ಪಡೆಯತಕ್ಕದ್ದು, 15 ದಿನಗಳ ನಂತರ ನಗರದಲ್ಲಿರುವ ಎಲ್ಲಾ ಸಾರ್ವಜನಿಕ ನಲ್ಲಿಗಳನ್ನು ತೆರವುಗೊಳಿಸಲಾಗುವುದು ಎಂದು ಪೌರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆಯ ಸಿಬ್ಬಂದಿಗಳು ಪ್ರತಿ ವಾರ್ಡ್ನಲ್ಲಿಯ ಮನೆಗಳಿಗೆ ಅನಧಿಕೃತ ನಲ್ಲಿ ಸಂಪರ್ಕ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಅನಧಿಕೃತ ನಲ್ಲಿ ಸಂಪರ್ಕ ಪಡೆದವರು ಒಂದು ವಾರದೊಳಗೆ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕದೊಳಗೆ ಸಕ್ರಮಗೊಳಿಸಬೇಕು. ತಪ್ಪಿದಲ್ಲಿ ನಲ್ಲಿ ಸಂಪರ್ಕ ಕಡಿತಗೊಳಿಸಿ ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

