ಸುದ್ದಿ ಸಂಕ್ಷೇಪ
25ರ ವರೆಗೆ ಬೇಸಿಗೆ ಶಿಬಿರ
ಚಿಕ್ಕಮಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರವನ್ನು ಮೇ 15 ರಿಂದ 25 ರವರೆಗೆ ನಗರಸಭೆಯ ಆವರಣದಲ್ಲಿರುವ ಬಾಲಭವನದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಚಿತ್ರಕಲೆ ಕರಕುಶಲಕಲೆ, ಜೇಡಿಮಣ್ಣಿನ ಕಲೆ, ಸಮೂಹಗೀತೆ, ಸಮೂಹನೃತ್ಯ ಹಾಗೂ ಯೋಗ ಕಲಿಸಿಕೊಡಲಾಗುವುದು. ಆಸಕ್ತ 5 ರಿಂದ 16 ವರ್ಷದ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಚೇರಿ, ಚಿಕ್ಕಮಗಳೂರು ಅಥವಾ ಜಿಲ್ಲಾ ಬಾಲಭವನವನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಚಿಕ್ಕಮಗಳೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕ- ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನರಿಗುಡ್ಡೇನಹಳ್ಳಿ, ಚಿಕ್ಕಮಗಳೂರು, ರಾಮನಹಳ್ಳಿ, ಕಳಸಾಪುರ, ಬೆಳವಾಡಿ, ಶಿರವಾಸೆ, ಮಲ್ಲಂದೂರು, ಮೈಲಿಮನೆ, ಆಲ್ದೂರು, ಶಿರವಾಸೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ, ಮಳಲೂರು, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಸಂತ ಜೋಸಫರ ಕಾನ್ವೆಂಟ್ ಬಾಲಕಿಯರ ವಿದ್ಯಾರ್ಥಿ ನಿಲಯ ಚಿಕ್ಕಮಗಳೂರು, ಶ್ರೀ ಬಸವರಾಜ ದೇಶಿ ಕೇಂದ್ರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಣಿವೇಹಳ್ಳಿ ಚಿಕ್ಕಮಗಳೂರಿನ ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 8 ಕಡೆಯ ದಿನ, ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವ
ಮೂಡಿಗೆರೆ: ಪಟ್ಟಣದ ದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವರ ವಧಂತ್ಯುತ್ಸವದ ಅಂಗವಾಗಿ ಎರಡನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಬುಧವಾರ ಮತ್ತು ಗುರುವಾರದ ದಂದು ಶ್ರೀ ದೇವಿರಮ್ಮನವರ ಬನ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ನಡೆಯಿತು. ಬುಧವಾರ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಪ್ರಕಾರ ಬಲಿ ನಡೆಯಿತು. ಗುರುವಾರ ಬೆಳಗ್ಗೆ ಗಣಯಾಗ, ನಾಗದೇವರು, ಗಣಪತಿ, ಸುಭ್ರಮಣ್ಯ, ಅಯ್ಯಪ್ಪ ದೇವರ ಕಲಶಾಧಿವಾಸಗಳು, ತತ್ವ ಆಧಿವಾಸ ಹೋಮಗಳು, ದುರ್ಗಾ ಹೋಮ, ಕೋಶಾಭಿಷೇಕ ಮಹಾಪೂಜೆ, ಪ್ರಸಾಧ ವಿತರಣೆ ನಡೆಯಿತು. ಪೂಜಾ ಕೈಂಕರ್ಯಗಳು ಶಿವಪ್ರಸಾದ್ ಭಟ್ ನೇತೃತ್ವದಲ್ಲಿ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

