ಚಿಕ್ಕಮಗಳೂರು

ಕೆಲಸ ಪಾರದರ್ಶಕವಾಗಿರಲಿ: ನಿಂಗಯ್ಯ

Published On :

ಕಪ್ರವಾರ್ತೆ,ಮೂಡಿಗೆರೆ,ಮೇ16
 ಇನ್ನು ಮುಂದೆ ಸಾರ್ವಜನಿಕರ ಮತ್ತು ಅಧಿಕಾರಿಗಳ ನಡುವೆ ಮಧ್ಯವರ್ತಿಗಳು ಕಾರ್ಯನಿರ್ವಹಿಸಿದ್ದು ಕಂಡು ಬಂದಲ್ಲಿ ಅಂತಹ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ನೂತನ ಶಾಸಕ ಬಿ.ಬಿ.ನಿಂಗಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ಯನ್ನು ನೀಡಿದರು.
 ತಾಲೂಕ್ ಪಂಚಾಯಿತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸ ದೇವರ ಕೆಲಸ ಎಂಬ ನಿಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನೆಪ ಹೇಳಬೇಡಿ: ಸಮಸ್ಯೆಗಳು ಏನೇ ಇರಬಹುದು ಆದರೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಪರಿಹಾರ ಕಂಡುಹಿಡಿಯಬೇಕು. ದೂರದಿಂದ ಸಮಸ್ಯೆಗಳನ್ನು ಹೊತ್ತು ಬಂದಂತಹವರಿಗೆ ನಾಳೆ ನಾಳಿದ್ದು ಎಂದು ಕುಂಟು ನೆಪ ಹೇಳದೆ. ತಮ್ಮ ಕೈಲಾದ ಮಟ್ಟಿಗೆ ಸಮಸ್ಯೆಯನ್ನು ಪರಿಹರಿಸುವಂತೆ, ಅಭಿವೃದ್ದಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡು ವಂತೆ ಅಧಿಕಾರಿಗಳಿಗೆ  ಹೇಳಿದರು.
 ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಡಾ.ಪ್ರಶಾಂತ್, ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿ ರಾವ್, ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಮೇಕಾಲೆ,  ತಾಲೂಕ್ ಪಂಚಾಯಿತ್ ಅಧ್ಯಕ್ಷ ಎ.ಎ.ಶೇಷಗಿರಿ, ಜಿ.ಪಂ.ಸದಸ್ಯರುಗಳಾದ ಜ್ಯೋತಿ ಹೇಮಶೇಖರ್, ಎಂ.ಎಸ್.ಅನಂತ್, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಹಿತ್ಲಮಕ್ಕಿ ರಾಜೇಂದ, ರಂಜನ್ ಅಜಿತ್ ಕುಮಾರ್, ಸದಸ್ಯರುಗಳಾದ ಸುಬ್ರಾಯ, ಹೂವಮ್ಮ, ನೇಪಾ ಆದಿತ್ಯ, ವೃತ್ತ ನಿರೀಕ್ಷಕ ರಮೇಶ್, ಲೋಕೋಪಯೋಗಿ. ಜಿಲ್ಲಾ ಪಂಚಾಯಿತ್, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.