ಚಿಕ್ಕಮಗಳೂರು

ಇಂದು ಶ್ರೀಜಡೇಶಂಕರಲಿಂಗೇಶ್ವರ ಸ್ವಾಮಿಯ ಪ್ರತಿಷ್ಠಾಪನೆ

Published On :

ನ್ಯಾಮತಿ: ಇಲ್ಲಿಗೆ ಸಮೀಪದ ಚಟ್ನಹಳ್ಳಿ ಗ್ರಾಮದಲ್ಲಿ ಜಡೇಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಹೊಟ್ಯಾಪುರ ಹಿರೇಮಠ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಮೇ 20ರಂದು ಶ್ರೀಜಡೇಶಂಕರಲಿಂಗೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ಜರುಗುವುದು.  ಮೇ 21ರಂದು ಬೆಳೆಗ್ಗೆ ಶ್ರೀಗಳಿಂದ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯುವುದು. 24ರಂದು ಗೋಪುರದ ಕಳಸಾರೋಹಣ ಮತ್ತು ಸರ್ವಶರಣರ ಸಮ್ಮೇಳನ ನಡೆಯುವುದು.
23ರಂದು ಪ್ರತಿಷ್ಠಾಪನೆ: ಇಲ್ಲಿಗೆ ಸಮೀಪದ ಕಂಚಿಗನಹಳ್ಳಿ ಬೀರಲಿಂಗೇಶ್ವರ ದೇವಸ್ಥಾನದ ನೂತನಕಟ್ಟಡ ಪ್ರವೇಶ ಹಾಗೂ ಪ್ರತಿಷ್‌ಠಾಪನಾ ಕಾರ್ಯಕ್ರಮ ಮೇ.23.ರಂದು ನಡೆಯಲಿದೆಯೆಂದು ದೇವಸ್ಥಾನದ ಸಮಿತಿ ತಿಳಿಸಿದೆ.
ರಥೋತ್ಸವ: ಸುರಹೊನ್ನೆ ಗ್ರಾಮದಲ್ಲಿ ಚನ್ನಮಲ್ಲಿಕಾರ್ಜುನ ಸ್ವಾಮಿ ಮತ್ತು ಆಧಿಶಕ್ತಿ ದೇವಿಯ ರಥೋತ್ಸವ ಕಾರ್ಯಕ್ರಮಗಳು ಮೇ 26ರಿಂದ ಜೂನ್ 1ರವರೆಗೆ ನಡೆಯಲಿದೆಯೆಂದು ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿ, ಆಧಿಶಕ್ತಿದೇವಿ ಮತ್ತು ಗಡೇಚೌಡೇಶ್ವರಿ ಸೇವಾ ಸಮಿತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.