ಚಿಕ್ಕಮಗಳೂರು

ಬಿ.ಎಚ್.ರಸ್ತೆ ಶೀಘ್ರ ಅಭಿವೃದ್ಧಿ: ಶಾಸಕ ಶ್ರೀನಿವಾಸ್

Published On :

ತರೀಕೆರೆ: ಪಟ್ಟಣದಲ್ಲಿ ಹಾದುಹೋಗಿರುವ ರಾ.ಹೆ. ಬಿ.ಎಚ್. ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರದಲ್ಲಿ ನೆರವೇರಲಿದೆ ಎಂದು ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದ್ದಾರೆ.     
ಈ ಬಗ್ಗೆ ರಾ.ಹೆ. ಮುಖ್ಯ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ  ಬಿ.ಎಚ್. ರಸ್ತೆಯ ಎರಡು ಪಕ್ಕದಲ್ಲಿ ಚರಂಡಿ ನಿರ್ಮಾಣ, ವಾಹನಗಳ ದ್ವಿಮುಖ ಸಂಚಾರ ವ್ಯವಸ್ಥೆ ಇತ್ಯಾದಿ ಅಭಿವೃದ್ಧಿ ಕುರಿತು ರು. 200 ಕೋಟಿ ಎಸ್ಟಿಮೇಟ್ ಆಗಿದ್ದು, ಹಣಕಾಸು ಇಲಾಖೆಯ ಅನುಮೋದನೆ ಪಡೆದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಮೊದಲ ಆದ್ಯತೆ: ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಸಹಕಾರದಿಂದ ಪಟ್ಟಣದ ವ್ಯಾಪ್ತಿಯ ಬಿ.ಎಚ್. ರಸ್ತೆಯಲ್ಲಿ ಡಿವೈಡರ್ ಅಳವಡಿಸುವಿಕೆ, ಸಂಚಾರ ನಿಯಂತ್ರಣ ಸೂಚಕ ಫಲಕಗಳನ್ನು ಅಳವಡಿಸುವಿಕೆ ಇತ್ಯಾದಿ ಎಲ್ಲ ರೀತಿಯಲ್ಲಿ ಅಬಿವೃದ್ಧಿಪಡಿಸಲು ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳೂ ಉತ್ತಮ ಗುಣಮಟ್ಟದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ನೂತನ ಪುರಸಭಾ ಸದಸ್ಯರಾದ ಟಿ.ಎಸ್. ಧರ್ಮರಾಜ್, ಈರಣ್ಣ ಪ್ರಕಾಶ್ ವರ್ಮ, ಅಶೋಕ್ ಕುಮಾರ್, ಮಾಜಿ ಸದಸ್ಯ ಶ್ರೀಧರ್ ಪತ್ರಿಕೆಗೆ ತಿಳಿಸಿದ್ದಾರೆ.
ದ್ವಿಮುಖ ರಸ್ತೆ ಅಗತ್ಯ: ಈಗಾಗಲೇ ಅಗಲೀಕರಣವಾಗಿರುವ ಬಿ.ಎಚ್. ರಸ್ತೆಯಲ್ಲಿ ಡಿವೈಡರ್ ಅಳವಡಿಸಿ ವಾಹನ ಅಪಘಾತ ನಿಯಂತ್ರಿಸಿ, ವಾಹನ ಮತ್ತು ಸುಗಮ ಜನಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.