ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೂ ವಿಸ್ತರಿಸಲಿ
ಶಿಕಾರಿಪುರ- ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ತಾಲೂಕಿನ ಕೊಡುಗೆ ಅನನ್ಯವಾದುದು. ಈ ಕಂಪನ್ನು ಮುಂದಿನ ಪೀಳಿಗೆಗೂ ವಿಸ್ತರಿಸುವ ದಿಸೆಯಲ್ಲಿ ಸಾಹಿತ್ಯ ಸಮ್ಮೇಳನ ಸೂಕ್ತ ವೇದಿಕೆಯಾಗಬೇಕಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಪಟ್ಟಣದಲ್ಲಿ ನಡೆಯಲಿರುವ 4 ನೇ ತಾಲೂಕು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಸಾಪ ಪದಾಧಿಕಾರಿಗಳ ಮೂಲಕ ಸ್ವೀಕರಿಸಿ ಸಮ್ಮೇಳನದ ಯಶಸ್ಸಿಗೆ ಕೈಗೊಳ್ಳಬೇಕಾದ ಸಿದ್ದತೆ, ಮುಂಜಾಗ್ರತೆ ಬಗ್ಗೆ ಅವರು ಗುರುವಾರ ಚರ್ಚಿಸಿದರು.
ಆದರ್ಶ ಬಿತ್ತಬೇಕು: ಕನ್ನಡ ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ 12 ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಾರಣಕರ್ತರಾಗಿದ್ದು, ಇವರೊಂದಿಗೆ ಅಲ್ಲಮಪ್ರಭು, ಅಜಗಣ್ಣ, ಮುಕ್ತಾಯಕ್ಕ, ಅಕ್ಕಮಹಾದೇವಿ, ಸತ್ಯಕ್ಕ ಮತ್ತಿತರರ ಶರಣರು ತಾಲೂಕಿನಲ್ಲಿ ಜನ್ಮತಳೆದು ಆ ಮೂಲಕ ಸರಳತೆ, ವೈಚಾರಿಕತೆ,ದ್ಯೇಯವನ್ನು ಪ್ರತಿಪಾದಿಸಿದರು ಎಂದ ಅವರು, ಇಂತಹ ಶರಣ ಶ್ರೇಷ್ಠರ ಬಗ್ಗೆ ಸಮ್ಮೇಳನದ ಮೂಲಕ ಯುವಪೀಳಿಗೆಯಲ್ಲಿ ಅವರ ಆದರ್ಶ, ತತ್ವ, ಸಿದ್ದಾಂತವನ್ನು ಮೈಗೂಡಿಸಬೇಕಾದ ಅನಿವಾರ್ಯತೆಯಿದ್ದು ಸಮ್ಮೇಳನ ಈ ದಿಸೆಯಲ್ಲಿ ಉತ್ತಮ ವೇದಿಕೆಯಾಗಬೇಕಾಗಿದೆ ಎಂದು ಆಶಿಸಿದರು.
ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಕಂದಾಚಾರ,ಮೂಡನಂಬಿಕೆಯ ವಿರುದ್ದ ಸಿಡಿದೆದ್ದ ಅಕ್ಕಮಹಾದೇವಿ ಜನ್ಮತಳೆದ ನಾಡಿನಲ್ಲಿನ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆಯನ್ನು ಮಹಿಳಾ ಸಾಹಿತಿ ವಹಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದ ಅವರು ಸಮ್ಮೇಳನದ ಯಶಸ್ಸಿಗೆ ಸರ್ಕಾರಿ,ಸರ್ಕಾರೇತರ ಎಲ್ಲಾ ಸಂಘ ಸಂಸ್ಥೆಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕಾಗಿದೆ ಎಂದು ಅವರು ಮನವಿ ಮಾಡಿದರು.
ಅಪರೂಪ: ರಾಜಕೀಯ ವ್ಯಕ್ತಿಗಳ ಮೆರವಣಿಗೆಯನ್ನು ವೀಕ್ಷಿಸಿದ್ದ ತಾಲೂಕಿನ ಜನತೆಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅಪರೂಪವಾಗಿದ್ದು, ಇಂತಹ ಹಲವು ಹೊಸತನಗಳಿಗೆ ಸಾಕ್ಷಿಯಾಗಲಿರುವ ಸಮ್ಮೇಳನದ ಯಶಸ್ಸಿಗೆ ತಾಲೂಕಿನ ಮಹಿಳೆಯರು, ಪುರುಷರು,ಯುವತಿಯರು, ಸ್ತ್ರೀ ಶಕ್ತಿ,ಸ್ವಸಹಾಯ ಸಂಘಟನೆಗಳ ಜತೆಗೆ ಸಾರ್ವಜನಿಕ ಕನ್ನಡ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಕಸಾಪ ಅದ್ಯಕ್ಷ ಸುದರ್ಶನ್,ಪದಾಧಿಕಾರಿ ಹುಚ್ರಾಯಪ್ಪ,ಸತ್ಯನಾರಾಯಣ,ಸುಧಾಕರ್,ನಾಗರಾಜಾಚಾರ್, ಪಾಪಯ್ಯ,ಬಿ.ಎಸ್.ಪಾಟೀಲ್, ಜಮೀರ್,ಇ.ಎಚ್. ಬಸವರಾಜ್, ನರಸಿಂಹ, ಕಾಳಿಂಗರಾವ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

