ಗಂಗನಮಕ್ಕಿ 2ನೇ ಹಂತ ಕಾಮಗಾರಿ ಆರಂಭ
ಕ.ಪ್ರ.ವಾರ್ತೆ ಮೂಡಿಗೆರೆ ಮೇ 24
ಪಟ್ಟಣದ ಕೆ.ಎಂ. ರಸ್ತೆಯನ್ನು ಗಂಗನಮಕ್ಕಿ ಎಂಬಲ್ಲಿ ಎರಡನೇ ಹಂತದಲ್ಲಿ 700 ಮೀಟರ್ ಕಾಂಕ್ರಿಟ್ ಕಾಮಗಾರಿ ಶುಕ್ರವಾರ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ರಸ್ತೆಯ ಎಡಬದಿಯಲ್ಲಿ 3.5 ಮೀಟರ್ವರೆಗೆ ಕಾಂಕ್ರಿಟೀಕರಣ ನಡೆಸಲಾಗಿತ್ತು. ಒಟ್ಟು7 ಮೀಟರ್ ಅಗಲದ ಈ ರಸ್ತೆಯನ್ನು ಮುಖ್ಯಮಂತ್ರಿ ನಿಧಿಯಿಂದ ರು. 1.7 ಕೋಟಿ ವೆಚ್ಚದಲ್ಲಿ ಸ್ಥಳೀಯ ಪಪಂ ನಿರ್ವಹಿಸುತ್ತಿದ್ದು, ರಶ್ಮಿ ಕನ್ಟ್ರ್ಸಕ್ಷನ್ ಕಂಪೆನಿ ಗುತ್ತಿಗೆ ಪಡೆದಿದೆ.
ಪಟ್ಟಣ ಪಂಚಾಯಿತಿ ಚುನಾವಣೆಗೂ ಮುನ್ನ ಕಾಮಗಾರಿ ಪ್ರಾರಂಭಿಸಿರುವ ಕಂಪೆನಿಯು ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸುತ್ತಿರುವುದರಿಂದ ಸಂಚಾರಕ್ಕೆ ತೊಡಕುಂಟಾಗುತ್ತಿರುವ ಕುರಿತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಅಕ್ರಮ ಮರಳು: ಕಾಮಗಾರಿಗೆ ಬಳಸುತ್ತಿರುವ ಮರಳನ್ನು ಅಕ್ರಮವಾಗಿ ಹೇಮಾವತಿ ನದಿಯಿಂದ ಸಾಗಿಸಲಾಗುತ್ತಿದೆ. ಮರಳು ಸಂಗ್ರಹಿಸಲು ಗುತ್ತಿಗೆ ಕಂಪೆನಿಯು ಈವರೆಗೆ ರಾಜಸ್ವದ ಹಣವನ್ನು ಕಟ್ಟಿಲ್ಲ. ಆದರೆ ಅಂತ್ಯದ ಬಿಲ್ ಮೂಲಕ ಮರಳಿನ ಹಣವನ್ನು ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರಾದರೂ ಅಂತಹ ನಿಯಮವು ನೂತನ ಮರಳು ನೀತಿಯಲ್ಲಿ ಇಲ್ಲದಿರುವ ಆರೋಪ ವ್ಯಕ್ತವಾಗುತ್ತಿದೆ.
ಕಾಮಗಾರಿಗೆ ಅಂದಾಜು 2 ಸಾವಿರ ಟ್ರಾಕ್ಟರ್ ಲೋಡ್ ಮರಳು ಬೇಕಾಗಿದ್ದು, ನಿಯಮಗಳನ್ವಯ ಪ್ರತಿ ಟ್ರಾಕ್ಟರ್ಗೆ ರು. 700 ರಂತೆ ಕನಿಷ್ಠ ರು. 14 ಲಕ್ಷ ರಾಜಸ್ವ ಸಂಗ್ರಹವಾಗಬೇಕಿದೆ.
ಕಳಪೆ ಕಾಮಗಾರಿ: ಒಂದು ಬದಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದಂತೆ ಅಲ್ಲಲ್ಲಿ ಬಿರುಕುಗಳು ಮೂಡಿದ್ದರಿಂದ ಕಳಪೆ ಕಾಮಗಾರಿ ನಡೆದಿರುವ ಆರೋಪಗಳಿವೆ. ಅಲ್ಲದೇ ಗುತ್ತಿಗೆದಾರರು ಗ್ಯಾರೇಜ್ ಸಂಘದ ಹೆಸರಿನಲ್ಲಿ ಫ್ರಾನ್ಸಿಸ್ ಎಂಬಾತನಿಗೆ
ರು. 45,000 ನೀಡಿರುವುದು ಬೆಳಕಿಗೆ ಬಂದಿದ್ದು, ಸ್ವತಃ ಗ್ಯಾರೇಜ್ ಕೆಲಸಗಾರರು ಇದನ್ನು ಪ್ರತಿಭಟಿಸಿದಾಗ ಸಂಘದ ಹೆಸರಿನಲ್ಲಿ ಪಡೆದಿದ್ದ ಹಣವನ್ನು ಹಿಂಪಡೆಯುವುದಾಗಿ ಫ್ರಾನ್ಸಿಸ್ ತಿಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

