ಚಿಕ್ಕಮಗಳೂರು

ಕಾರಿಗೆ ಕಲ್ಲೇಟು-ಶಾಲೆಗೆ ಗೇಟು!

Published On :

ಬೀರೂರು: ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಚ್‌ಪಿಬಿಎಸ್ ಶಾಲೆ ಬಳಿ ಚಲಿಸುತ್ತಿದ್ದ ಕಾರಿಗೆ ವಿದ್ಯಾರ್ಥಿಯೊಬ್ಬ ಕಲ್ಲು ಎಸೆದಿದ್ದರಿಂದ ಕಾರಿನ ಗಾಜು ಪುಡಿ ಪುಡಿಯಾಯಿತು. ಇದರಿಂದ ಬೆಸರಗೊಳ್ಳದ ಕಾರು ಮಾಲೀಕ ಆ ಶಾಲೆಗೆ ಗೆಟ್ ನಿರ್ಮಿಸಲು ಹಣ ಕಳುಹಿಸಿದ ಘಟನೆ ನಡೆದಿದೆ.
 ಶಾಲೆಯಲ್ಲಿ ಬೆಳಗಿನ ಸಮಯದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಾರಿನ ಮಾಲೀಕ ಭಟ್ಕಳದ ಸುಭ್ರಹ್ಮಣ್ಯ ಭಟ್ ಶಾಲೆಯ ಶಿಕ್ಷಕರ ಬಳಿ ವಿಷಯ ತಿಳಿಸಿದ್ದಾರೆ.
ಶಾಲೆಗೆ ಗೇಟ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಹೊರ ಬಂದು ಆಟವಾಡುತ್ತಿರುವುದನ್ನು ಅರಿತ ಭಟ್, ಊರಿಗೆ ತೆರಳಿ ಶಾಲೆಗೆ ಗೇಟನ್ನು ಅಳವಡಿಸಲು 10 ಸಾವಿರ ರು.ಗಳನ್ನು ಶಾಲಾ ಖಾತೆಗೆ ಕಳುಹಿಸಿದ್ದಾರೆ.
ನರಸಿಂಹ ಜಯಂತಿ: ಪುರಾತನವಾದ ಹೊಯ್ಸಳ ಶೈಲಿಯ ದೇವಾಲಯ ಭಗ್ಗವಳ್ಳಿಯಲ್ಲಿ  ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ನೆಡೆಸಲಾಯಿತು. ಬೆಂಗಳೂರಿನ ವಕೀಲ ಕೃಷ್ಣಮೂರ್ತಿರವರ ಮುಂದಾಳತ್ವದಲ್ಲಿ ಹೋಮ, ಹವನ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ತರೀಕೆರೆ ಹಾಗೂ ಕಡೂರು ತಾಲೂಕಿನ ಅನೇಕ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.