ಚಿಕ್ಕಮಗಳೂರು

ರೈಲಿಗೆ ಸಿಲುಕಿ ಹರಪನಹಳ್ಳಿ ವ್ಯಕ್ತಿ ಸಾವು

Published On :

ಬೀರೂರು: ಇಂಟರ್ ಸಿಟಿ ರೈಲಿಗೆ ಸಿಲುಕಿ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.  ಯಶವಂತಪುರದಿಂದ ದಾದಾರ್‌ಗೆ ತೆರಳುವ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ದಾವಣಗೆರೆಗೆ ತೆರಳಲು ಬಂದಿದ್ದ ಹರಪನಹಳ್ಳಿ ತಾಲೂಕು ಹಳ್ಳೀಕರೆ ಗ್ರಾಮದ ನಿವಾಸಿ ರೆಡ್ಡಿಮಲಕಪ್ಪ ಎರಡನೇ ಫ್ಲಾಟ್ ಫಾರಂನಲ್ಲಿ ನಿಂತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲನ್ನು ಹತ್ತುವ ಆತುರದಲ್ಲಿ  ಮೂದಲನೇ ಫ್ಲಾಟ್ ಫಾರಂಗೆ ಆಗಮಿಸುತ್ತಿದ್ದ ಧಾರವಾಡ ಇಂಟರ್ ಸಿಟಿ ಬೆಂಗಳೂರು ಇಂಟರ್ ಸಿಟಿ ರೈಲನ್ನು ಗಮನಿಸದೆ ಹಳಿ ದಾಟುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೂರು ದಿನಗಳ ಹಿಂದೆ ಕಡೂರಿನಲ್ಲಿ ಇರುವ ತಮ್ಮ ಮಗನ ಮನೆಗೆ ಬಂದು ವಾಪಸ್ ಹೋಗುವಾಗ ಬೀರೂರು ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 10.30ರ ಸುಮಾರಿನಲ್ಲಿ ಈ ಘಟನೆ ಸಂಭವಿಸಿದ್ದು ಮಧ್ಯಾಹ್ನ 1.30ರ ಸಮಯದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಆಗಮಿಸಿದರು.
ಕಾರು ಡಿಕ್ಕಿ: ಬೈಕ್ ಸವಾರ ಸಾವು
ದಾವಣಗೆರೆ ತಾ. ಆನಗೋಡು ಪ್ರಿಯದರ್ಶಿನಿ ಪಾರ್ಕ್ ಮುಂದಿನ ರಾಹೆ 4ರಲ್ಲಿ ದಾವಣಗೆರೆ ಕಡೆ ಬರುತ್ತಿದ್ದ ಬೈಕ್‌ಗೆ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಯಾರೆಂಬುದು ಗೊತ್ತಾಗಿಲ್ಲ. ಕಾರು ಚಾಲಕ ಕುಮಾರನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.