ಸಾಮರಸ್ಯ, ಸದ್ಭಾವನೆ ಸಾಹಿತ್ಯ ಅಗತ್ಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ನ.10
ಪರಸ್ಪರ ಸಾಮರಸ್ಯ ಸದ್ಭಾವನೆ ಮೂಡಿಸುವ ಸಾಹಿತ್ಯ ಇಂದಿನ ಅಗತ್ಯ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ಮಂಗಳೂರಿನ ಶಾಂತಿಪ್ರಕಾಶನದ ಬೆಳ್ಳಿಹಬ್ಬದ ಅಂಗವಾಗಿ ನಗರದ ವೈಶ್ಯ ಹಾಸ್ಟೆಲ್ ಸಭಾಂಗಣದಲ್ಲಿ ಭಾನುವಾರದಿಂದ 7 ದಿನಗಳ ಕಾಲ ಆಯೋಜಿಸಿರುವ ಬೃಹತ್ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಳ ಜೀವನ ಮೌಲ್ಯಗಳನ್ನು ಬಿತ್ತುವ ಪುಸ್ತಕಗಳು ಸಾಕಷ್ಟಿವೆ. ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವ ಪರಸ್ಪರ ಅರಿವು ಮೂಡಿಸುವ ವಿಫುಲ ಸಾಹಿತ್ಯ ಇಲ್ಲಿದೆ ಎಂದರು.
ಮನುಷ್ಯ ಜೀವನದ ಎಲ್ಲ ಹಂತಗಳಲ್ಲೂ ಅಗತ್ಯವಿರುವ ವಿವಿಧ ಸಂಗತಿಗಳನ್ನು ವಿವರಿಸುವ ಅತ್ಯುತ್ತಮ ಪುಸ್ತಕಗಳು ಇಲ್ಲಿದ್ದು, ಜಿಲ್ಲೆಯ ಸಾಹಿತ್ಯಾಸಕ್ತರು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಾಂತಿ, ಸೌಹಾರ್ಧತೆ ನೆಮ್ಮದಿ ಸಮಾಜದಲ್ಲಿ ನೆಲೆಸುವಂತಾಗಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಆರ್. ಗಫಾರಬೇಗ್, ಇಸ್ಲಾಂ ಅನ್ನು ಈ ಸಮಾಜಕ್ಕೆ ಅದರ ನೈಜ ರೂಪದಲ್ಲಿ ಪರಿಚಯಿಸಬೇಕೆಂಬ ಸದುದ್ದೇಶದಿಂದ ಜಮಾಅತೆ ಇಸ್ಲಾಂ ಹಿಂದ್ ಘಟಕವು ಕನ್ನಡ ಪ್ರಕಾಶನ ಸಂಸ್ಥೆ ಶಾಂತಿ ಪ್ರಕಾಶನವನ್ನು ಸ್ಥಾಪಿಸಿ 25 ವರ್ಷಗಳು ಪೂರ್ಣಗೊಂಡಿವೆ.
ಇದರ ಬೆಳ್ಳಿಹಬ್ಬವನ್ನು ಕರ್ನಾಟಕದಾದ್ಯಂತ ನವೆಂಬರ್ ತಿಂಗಳಿನಲ್ಲಿ ಶಾಂತಿಗಾಗಿ ಸಾಹಿತ್ಯ ಎಂಬ ರಾಜ್ಯ ವ್ಯಾಪಿ ಅಭಿಯಾನವನ್ನು ಆಚರಿಸಲಾಗುತ್ತಿದೆ. ಸಮ್ಮೇಳನ, ವಿಚಾರಗೋಷ್ಠಿ, ಪುಸ್ತಕಮೇಳ, ವಸ್ತು ಪ್ರದರ್ಶನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರಿನಲ್ಲೂ ನ. 10 ರಿಂದ 17ರವರೆಗೆ ಪುಸ್ತಕಮೇಳ ಆಯೋಜಿಸಿದ್ದು, ನ. 14 ರಂದು ಕುವೆಂಪು ಕಲಾಮಂದಿರದಲ್ಲಿ ವಿಚಾರಸಂಕಿರಣ ಏರ್ಪಡಿಸಲಾಗಿದೆ ಎಂದರು.
ಜಮಾಅತೆ ಇಸ್ಲಾಂ ಹಿಂದ್ ಘಟಕ ಅಧ್ಯಕ್ಷ ಹಾಫೀಜ್ ಅನ್ವರ್, ಮಾಜಿ ಅಧ್ಯಕ್ಷ ಡಾ. ಮೊಹಮ್ಮದ್ ಸ್ಹಾಲಿ, ತರೀಕೆರೆ ಪುರಸಭಾ ಸದಸ್ಯ ರೋಷನ್ ಪಾಷ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

