ರಸ್ತೆ ಅಭಿವೃದ್ಧಿ ಕಾಮಗಾರಿಗೆ ಷರತ್ತಿನ ಟೆಂಡರ್: ಗಾಯತ್ರಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ನ.13
ನಗರದ ಎಂ.ಜಿ. ರಸ್ತೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ಗೆ ರಾಜ್ಯ ಸರ್ಕಾರ ಷರತ್ತುಗಳೊಂದಿಗೆ ಅನುಮೋದನೆ ನೀಡಿದೆ ಎಂದು ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಎಂ.ಜಿ. ರಸ್ತೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ, ವಿಶೇಷ ಅನುದಾನದಡಿಯಲ್ಲಿ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಅಂದಾಜಿಗಿಂತ ಹೆಚ್ಚುವರಿ ದರ ನಮೂದಿಸಿದ್ದರಿಂದ ಹಾಗೂ ಒಬ್ಬರೇ ಟೆಂಡರ್ ಸಲ್ಲಿಸಿದ್ದರಿಂದ ಪರಿಶೀಲಿಸಿ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಸಚಿವರಿಗೆ ತಾವು ಬರೆದಿದ್ದ ಪತ್ರದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿ: ಎಂ.ಜಿ. ರಸ್ತೆ ಕಾಂಕ್ರಿಟೀಕರಣ, ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ, ಟೆಲಿಪೋನ್ ಕೇಬಲ್, ನೀರಿನ ಕೊಳವೆ ಪ್ರತ್ಯೇಕ ವ್ಯವಸ್ಥೆ, ಭೂಮಿ ಒಳಗೆ ವಿದ್ಯುತ್ ಕೇಬಲ್, ಎರಡೂ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ಎಲ್.ಇ.ಡಿ. ದೀಪ ಅಳವಡಿಸುವ ಕಾಮಗಾರಿಗೆ ರು. 9.02 ಕೋಟಿ ಟೆಂಡರ್ಗೆ ನಿಗದಿಸಲಾಗಿತ್ತು. ಗುತ್ತಿಗೆದಾರರು ರು. 11.07 ಕೋಟಿಗೆ ಟೆಂಡರ್ ಸಲ್ಲಿಸಿದ್ದು, ಶೇ. 22.7 ಹೆಚ್ಚುವರಿಯಾಗಿತ್ತು ಎಂದು ಹೇಳಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಕಾಂಕ್ರಿಟೀಕರಣ, ಚರಂಡಿ, ಟೆಲಿಪೋನ್ ಕೇಬಲ್ ಅಳವಡಿಕೆ, ಎಲ್.ಇ.ಡಿ ಬಲ್ಬ್ ಜೋಡಣೆ ಕಾಮಗಾರಿಗೆ 9.86 ಕೋಟಿ ಟೆಂಡರ್ಗೆ ಇಡಲಾಗಿತ್ತು. ಗುತ್ತಿಗೆದಾರರು 11.84 ಕೋಟಿಗೆ ಶೇ.16.70 ಹೆಚ್ಚುವರಿ ಟೆಂಡರ್ ಸಲ್ಲಿಸಿದ್ದರು ಎಂದರು.
ತಪ್ಪು ಹೇಳಿಕೆ: ಈ ಬಗ್ಗೆ ಪರಿಶೀಲಿಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಂತೆ ತಾವು ಪತ್ರ ಬರೆದಿದ್ದನ್ನೇ ಬಿಜೆಪಿ ಮುಖಂಡರು ತಮ್ಮ ವಿರುದ್ಧ ಷಡ್ಯಂತ್ರ ನಡೆಸಿ, ವಿಪ ಸದಸ್ಯರು ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆಂದು ತಪ್ಪು ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದರು ಎಂದು ಟೀಕಿಸಿದ್ದಾರೆ.
ಅನುಮೋದಿತ ಟೆಂಡರ್ ಚಾಲ್ತಿ ಸಾಲಿನ ಎಸ್.ಆರ್. ದರಗಳ ಮೇಲೆ ಶೇ. 5 ದರ ಹೆಚ್ಚಿಗೆಯಾಗಿದೆ ಎಂದು ತಿಳಿಸಿದರು. ತಾವು ಬರೆದಿದ್ದ ಪತ್ರವನ್ನು ಸರ್ಕಾರ ಪರಿಶೀಲಿಸಿ, ಈ ಕ್ರಮ ಕೈಗೊಂಡಿರುವುದರಿಂದ ಕೋಟ್ಯಂತರ ರು. ಉಳಿಸಿದಂತಾಗಿದೆ. ತಮ್ಮ ವಿರುದ್ಧ ಸುಳ್ಳು ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದಿದ್ದ ಬಿಜೆಪಿ ಮುಖಂಡರು ಈಗಲಾದರೂ ಸತ್ಯ ಸಂಗತಿ ಏನೆಂಬುದನ್ನು ಅರಿಯಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

