ಚಿಕ್ಕಮಗಳೂರು

ನಗರಸಭೆ ವ್ಯವಹಾರ ಕೇಂದ್ರವಾಗಬಾರದು

Published On :

ಚಿಕ್ಕಮಗಳೂರು: ನಗರಸಭೆ ವ್ಯವಹಾರಗಳ ಕೇಂದ್ರವಾಗಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸದಸ್ಯರು ಸ್ಪಂದಿಸುವ ಜೊತೆ ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದಾಗ ಮಾತ್ರ ಜನಪ್ರತಿನಿಧಿಗಳ ಮೇಲಿನ ನಂಬಿಕೆ, ಗೌರವ ಹೆಚ್ಚುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗೃಹ ಕಚೇರಿಯಲ್ಲಿ ಪಕ್ಷದ ನಗರಸಭೆ ಚುನಾಯಿತ ಪ್ರತಿನಿಧಿಗಳು ಬುಧವಾರ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಸಾಮರ್ಥ್ಯದ ಹೋರಾಟ: ನಗರಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚಿರುವಾಗ ಸಭೆಗಳಲ್ಲಿ ಕಾಂಗ್ರೆಸ್ ಸದಸ್ಯರು ಭ್ರಷ್ಟಾಚಾರದ ವಿರುದ್ದ ಸ್ವಂತ ಸಾಮರ್ಥ್ಯದ ಮೇಲೆ ಹೋರಾಟ ಮಾಡುವ ಅಗತ್ಯವಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಸಭೆಯಲ್ಲಿ ನಡೆದ ಹಗರಣಗಳನ್ನು ಕಾಂಗ್ರೆಸ್ ಸದಸ್ಯರು ಬಯಲು ಮಾಡುವ ಎಲ್ಲಾ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಸಭೆಯಲ್ಲಿ ಭಾಗವಹಿಸುವ ಮುನ್ನ ಅಜೆಂಡಾಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಜಿಲ್ಲಾ ಮುಖಂಡರು ಮತ್ತು ಅನುಭವಿ ಸದಸ್ಯರ ಸಲಹೆ ಸಹಕಾರ ಪಡೆದು ಚರ್ಚಿಸಿದಾಗ ಭ್ರಷ್ಟಾಚಾರ ತಡೆಗಟ್ಟುವ ಜೊತೆ ಊರಿನ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ ಎಂದರು.
ಪ್ರಾಮಾಣಿಕ ಪ್ರಯತ್ನ: ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಮತ್ತು ಮುಖಂಡರುಗಳು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಜವಾಬ್ಧಾರಿ ನೀಡಿದ್ದಾರೆ.
ನಂಬಿಕೆಗೆ ಚ್ಯುತಿ ಬಾರದಂತೆ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿ ಸಂಘಟನೆ ಬಲಗೊಳಿಸಲು ಒತ್ತು ಕೊಟ್ಟು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸಬೇಕಾದ ಹೊಣೆ ನಮ್ಮ ಮೇಲಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಿದ ಜನಪರ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಗಳು ಸಹಕಾರಿಯಾಗಲಿದೆ ಎಂದರು.
ಪಕ್ಷ ಸಂಘಟನೆಗೆ ಒತ್ತು: ನಗರಸಭೆ ನಿಯೋಜಿತ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಮಾತನಾಡಿ, ನಗರಸಭೆಯಿಂದ ಜನರಿಗಾಗುವ ಉಪಯೋಗಗಳ ಬಗ್ಗೆ ನಾವುಗಳು ಧ್ವನಿ ಎತ್ತಿದಾಗ ಸರ್ಕಾರ ಮತ್ತು ನಮ್ಮ ನಡುವೆ ಸೇತುವೆಯಾಗಿ ಜಿಲ್ಲಾ ಕಾಂಗ್ರೆಸ್ ಸ್ಪಂದಿಸುತ್ತದೆ ಎಂಬ ನಂಬಿಕೆ ನಮಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಗರಸಭೆಯಲ್ಲಿ ಬಹುಮತವಿಲ್ಲದಿದ್ದರೂ ಅಧ್ಯಕ್ಷರಾದ ನೀವು ನೈತಿಕವಾದ ಬೆಂಬಲ ನೀಡುತ್ತೀರೆಂಬ ವಿಶ್ವಾಸವಿದೆ, ಅದೇರೀತಿ ನಿಮ್ಮೊಂದಿಗೆ ನಾವೂ ಸಹ ಪಕ್ಷ ಸಂಘಟನೆಗೆ ಉಪಯೋಗವಾಗುವ ರೀತಿ ಒಗ್ಗಟ್ಟಿನಿಂದ ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡೋಣ ಎಂದರು.
ಯುವ ಕಾಗ್ರೆಸ್ ಮುಖಂಡ ಬಿ.ಎಂ. ಸಂದೀಪ್ ,ನಗರಸಭೆ ಸದಸ್ಯರಾದ ಲಕ್ಮಣ್, ರೂಬಿನ್ ಮೊಸಸ್, ತೇಜ್ಕುಮಾರ್, ಸುರೇಖಾ ಸಂಪತ್, ಅನು ಮಧುಕರ್, ಜಗದೀಶ್, ಯಶೋಧ ಗಂಗಾಧರ್, ಮುಖಂಡರಾದ ಐ.ಕೆ. ಓಂಕಾರೇಗೌಡ, ಬಿ.ಎಂ. ಸಂದೇಶ್, ಪ್ರಕಾಶ್, ಟಿ.ಕೆ. ಕುಳ್ಳನ್, ಹೇಮಣ್ಣಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.