ಚಿಕ್ಕಮಗಳೂರು

ರೈತರ ಹಿತಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ: ಧರ್ಮೇಗೌಡ

Published On :

ಕ.ಪ್ರ. ವಾರ್ತೆ  ಕಡೂರು  ನ.17
ರೈತರ ಹಿತಕ್ಕಾಗಿರುವ ಸಹಕಾರಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ 8.44 ಕೋಟಿ ರೈತರ ಸಾಲಮನ್ನಾ ಮಾಡಿದ್ದು, ರೈತರು ಸಹಕಾರಿ ಕ್ಷೇತ್ರಕ್ಕೆ ನಮ್ಮ ಕೊಡುಗೆ ಏನು ಎಂಬ ವಿಮರ್ಶೆ ಅಗತ್ಯ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಸ್. ಎಲ್.ಧರ್ಮೇಗೌಡ ಹೇಳಿದರು.
ಪಟ್ಟಣದ ಟಿಡಿಎಸ್ ಟವರ್ಸ್ನಲ್ಲಿ ನಡೆದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಸಹಕಾರ ಮಾರಾಟ ಸಂಸ್ಕರಣ ಮತ್ತು ಗ್ರಾಹಕ ದಿನ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರದ 60ನೇ ವರ್ಷಾಚರಣೆಯನ್ನು ರಾಷ್ಟ್ರಾದ್ಯಂತ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಹಕಾರಿ ಚಳವಳಿಯಿಂದ ಕ್ಷೇತ್ರದಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳುವ ಅಗತ್ಯವಿದೆ. ಆದರೆ ರೈತರ ಇಂತಹ ಕಾರ್ಯಕ್ರಮಕ್ಕೆ ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಬಂದಿರುವುದು ವಿಷಾದದ ಸಂಗತಿ ಎಂದರು.
ಜಿಲ್ಲೆಯಲ್ಲಿ ಸುಮಾರು 145 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, ಹಾಸನ ಹಾಲು ಒಕ್ಕೂಟದಿಂದ ತಿಂಗಳಿಗೆ 36 ಕೋಟಿ ವ್ಯವಹಾರ ನಡೆಸುವ ಮೂಲಕ 22 ಕೋಟಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನಿಂದ ಬಟವಾಡೆ ಮಾಡಲಾಗುತ್ತಿದೆ. ಪ್ರತಿ ರೈತರಿಗೆ 3 ಲಕ್ಷವರೆಗೆ ಸಾಲ ನೀಡುವ ಅವಕಾಶವಿದ್ದು, ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾಗುತ್ತಿದ್ದಾರೆ ಎಂದು ಎಚ್ಟರಿಸಿದರು.
ರೈತರಿಗೆ ಕೇಂದ್ರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಮಾತ್ರ ಆತ್ಮೀಯವೇ ಹೊರತು ರಾಷ್ಟ್ರೀಕೃತ ಬ್ಯಾಂಕಲ್ಲ ಎಂಬುದನ್ನು ತಿಳಿಯಬೇಕು ಎಂದು ಹೇಳಿದ ಅವರು, ರೈತರು ಸಹಕಾರಿ ಕ್ಷೇತ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಸರ್ಕಾರವು ಬಗೆಹರಿಸಬೇಕು. ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಹಾಜರಿರುವುದು ಸಾಲ ಮನ್ನಾ ಪಡೆದ ರೈತರು ಹಾಜರಾಗದೇ ಇರುವುದು ವಿಷಾದದ ಸಂಗತಿ ಎಂದು ಹೇಳಿದರು.
ರಾಜಕೀಯ ಬೇಡ: ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್ ಮಾತನಾಡಿ, ರೈತರ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡಿ ರೈತರಿಗೆ ಅಗತ್ಯ ಬೆಲೆ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಚುನಾಯಿತ ಜನಪ್ರತಿನಿಧಿಗಳು ರಾಜಕೀಯವನ್ನು ದೂರ ಇಟ್ಟು ಸಹಕರಿಸಿದರೆ ಸಹಕಾರಿ ರಂಗ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬಾಂಕಿನ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ವಿ. ಬಸವರಾಜಪ್ಪ ಉಪನ್ಯಾಸ ನೀಡಿದರು.
 ಸಮಾರಂಭದಲ್ಲಿ ಬಿ.ಸಿ. ಲೋಕಪ್ಪಗೌಡ, ತಾಪಂ ಅಧ್ಯಕ್ಷ ಎನ್. ಓಂಕಾರಮೂರ್ತಿ, ಎಸ್.ಜಿ. ರಾಮಪ್ಪ, ಕೆ.ಎಂ. ಶಿವಕುಮಾರಸ್ವಾಮಿ, ಡಿ.ಪಿ.  ಲೋಕೇಗೌಡ, ಎ. ಶಕೀಲ್ ಉರ್ ರೆಹಮಾನ್, ಶಿವರಾಜ್ ಅಂಕೋಣಿ, ಬಿ.ಕೆ. ಮುಂಕುಂದಯ್ಯ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.