ಚಿಕ್ಕಮಗಳೂರು

ಸತ್ಯಸಾಯಿ ಸತ್ಕಾರ್ಯಕ್ಕೆ ಪ್ರೇರಕ

Published On :

ಚಿಕ್ಕಮಗಳೂರು: ಶ್ರೀಸತ್ಯಸಾಯಿ ಸತ್ಕಾರ್ಯಗಳಿಗೆ ಪ್ರೇರಕ ಶಕ್ತಿ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ನಗರದ ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಶನಿವಾರ ನಡೆದ ಭಗವಾನ್ ಶ್ರೀಸತ್ಯಸಾಯಿಬಾಬಾ ಅವರ 88 ನೇ ಜನ್ಮದಿನೋತ್ಸವವನ್ನು ಪುಷ್ಪಾರ್ಚನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆಯೂ ಸಾಯಿ ಕ್ಷೇತ್ರಗಳಿಗೆ ಭೇಟಿ ನೀಡಿರುವ ತಾವು. ಇಲ್ಲಿರುವ ಸದ್ಭಾವನೆ ಮೆಚ್ಚುಗೆಯ ಅಂಶ. ಎಲ್ಲ ಸದ್ಭಕ್ತರಿಗೂ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸಿದರು.
ಬೆಳಿಗ್ಗೆ 8 ಗಂಟೆಗೆ ಪ್ರಶಾಂತಿ ಧ್ವಜಾರೋಹಣದೊಂದಿಗೆ ಬಾಬಾ ಅವರ ಜನ್ಮದಿನೋತ್ಸವಕ್ಕೆ ಚಾಲನೆ ದೊರೆಯಿತು. ರುದ್ರ ಪಠಣದ ನಂತರ ಎಲ್ಲ ಭಕ್ತರು ಜ್ಯೋತಿ ಬೆಳಗಿದರು. ನಂತರ ರುದ್ರಾಭಿಷೇಕ ಮತು ಶಿವನ ಸಹಸ್ರ ನಾಮಾರ್ಚನೆಯನ್ನು ಸಾಮೂಹಿಕವಾಗಿ ನಡೆಸಿದರು.  ಭಜನೆ ವಿಶೇಷವಾಗಿ ಸೇವೆ ನಡೆಯಿತು. ಬಾಬಾ ಅವರ ಸೇವಾಕಾರ್ಯ ದೈವೀಸಂಕಲ್ಪಗಳನ್ನು ವಿಶೇಷವಾಗಿ ಸ್ಮರಿಸಲಾಯಿತು. ಸಂಜೆ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಶ್ರೀಬಾಬಾ ಅವರ ಭಾವಚಿತ್ರವನ್ನು ದೀಪಾಲಂಕೃತ ಸಪ್ತಾಶ್ವರಥದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಸಮವಸ್ತ್ರ ಧರಿಸಿದ ಭಕ್ತರು ಭಜನೆಯೊಂದಿಗೆ ಪಾಲ್ಗೊಂಡಿದ್ದರು.
ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಅಧ್ಯಕ್ಷ ರಾಮರಾವ್, ಸಂಸ್ಥಾಪಕ ಅಧ್ಯಕ್ಷ ಎಂ.ಆರ್. ನಾಗರಾಜ್, ಸಂಚಾಲಕ ಶ್ರೀನಿವಾಸಲು, ಅಧ್ಯಯನಗೋಷ್ಠಿ ಸಂಯೋಜಕ ಶಿವಮೂರ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಗೋಪಾಲಕೃಷ್ಣ, ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಅಂಕೋಲೇಕರ್ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.