ಚಿಕ್ಕಮಗಳೂರು

ವಿಭಕ್ತ ಕುಟುಂಬಗಳಲ್ಲಿ ಸ್ವಾರ್ಥವೇ ಹೆಚ್ಚು

Published On :

ನರಸಿಂಹರಾಜಪುರ: ನಮ್ಮಲ್ಲಿರುವ ಜ್ಞಾನವನ್ನು ಬೇರೆಯವರಿಗೆ  ಪ್ರಸರಿಸಬೇಕು. ಮನುಷ್ಯನಿಗೆ ಜ್ಞಾನಕ್ಕಿಂತ ದೊಡ್ಡ ಶ್ರೀಮಂತಿಗೆ ಬೇರೆ ಯಾವುದು ಇಲ್ಲ ಎಂದು ನಿವೃತ್ತ ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ ತಿಳಿಸಿದರು.
ಬಸ್ತಿಮಠದ ಮಹಾವೀರ ಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಕೇಂದ್ರ ಮತ್ತು ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕ ದಿನಾಚರಣೆ ಮತ್ತು ಸ್ವಾಸ್ಥ್ಯ ಕುಟುಂಬದ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾರ್ಥ ಹೆಚ್ಚಳ: ಕುಟುಂಬದಲ್ಲಿ ಪರಸ್ಪರ ನಂಬಿಕೆ ಎನ್ನುವುದು ಮುಖ್ಯ. ಹಿಂದೆ ನಮ್ಮ ದೇಶದ ಸಂಸ್ಕೃತಿ ಪ್ರತೀಕವಾಗಿ ಅವಿಭಕ್ತ ಕುಟುಂಬಗಳು ಸಾಮರಸ್ಯದಿಂದ ಸಂಸಾರ ಮಾಡಿ ವಿಶ್ವಕ್ಕೇ ಮಾದರಿಯಾಗಿದ್ದವು. ಆದರೆ, ಈಗ ವಿಭಕ್ತ ಕುಟುಂಬಗಳಾಗಿ ಸ್ವಾರ್ಥವೇ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಸಾಹಿತಿ ಜಯಮ್ಮ ಸ್ವಾಸ್ಥ್ಯ್ಯ ಕುಟುಂಬ ಎಂಬ ವಿಷಯದ ಬಗ್ಗೆ ಮಾತನಾಡಿ, ಸಮಾಜದ ಒಂದು ಸಣ್ಣ ಘಟಕವೇ ಕುಟುಂಬವಾಗಿದೆ. ಕುಟುಂಬವನ್ನು ನಿರ್ವಹಿಸುವ ಎಲ್ಲ ಸಾಮರ್ಥ್ಯ ಮಹಿಳೆಗಿದೆ. ಅನಕ್ಷರತೆ, ಮೂಢನಂಬಿಕೆ, ಮದ್ಯಪಾನ ಮುಂತಾದ ದುಷ್ಚಟಗಳಿಂದ ಕೆಲವು ಕುಟುಂಬಗಳಲ್ಲಿ ಸ್ವಾಸ್ಥ್ಯಕೆಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಧ.ಗ್ರಾ. ಯೋಜನೆಯ ಕೊಪ್ಪ, ಶೃಂಗೇರಿ, ನ.ರಾ. ಪುರ ತಾಲೂಕುಗಳ ಯೋಜನಾಧಿಕಾರಿ ಉಮಾವತಿ ಧ.ಗ್ರಾ. ಯೋಜನೆ ಬಗ್ಗೆ ಮಾತನಾಡಿದರು.
ಸಂಯೋಜಕಿ ಭಾನು ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜ್ವಾಲಾಮಾಲಿನಿ ಪ್ರೌಢ ಶಿಕ್ಷಕ ಗುಣಪಾಲ್ ಜೈನ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.