ಅಡಕೆ, ಒತ್ತುವರಿ ಸಮಸ್ಯೆ ಪರಿಹರಿಸಿದ್ದು ಕಾಂಗ್ರೆಸ್
ಕ.ಪ್ರ.ವಾರ್ತೆ , ಚಿಕ್ಕಮಗಳೂರು, ಏ.4
ಅಡಕೆ, ಅರಣ್ಯ ಒತ್ತುವರಿ ಸಮಸ್ಯೆ ಹುಟ್ಟಿಗೆ ಬಿಜೆಪಿ, ಅವುಗಳ ಪರಿಹಾರಕ್ಕೆ ಕಾಂಗ್ರೆಸ್ ಕಾರಣ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಮಸ್ಯೆಗಳು ಹುಟ್ಟಿಕೊಂಡಿದ್ದು, ಅವರೇ ಪರಿಹಾರ ಮಾಡಲೀ ಎಂದು ನಾವು ಸುಮ್ಮನೆ ಕುಳಿತುಕೊಂಡಿಲ್ಲ. ಈ ಸಮಸ್ಯೆಗಳ ಪರಿಹಾರಕ್ಕೆ ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ ಎಂದು ಚಿಕ್ಕಮಗಳೂರು ಪ್ರೆಸ್ ಕ್ಲಬ್ ಶುಕ್ರವಾರ ಏರ್ಪಡಿಸಿದ್ದ “@ºÚÀ£%¾æàM¦Væ ÑÚMÈÛ¥Ú’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಾಸ: ಜಿಲ್ಲೆಯಲ್ಲಿ ಹಲವು ಹಳೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಸಂಸದರಾಗಿ ಸಿಕ್ಕಿದ್ದ ಅತ್ಯಂತ ಕಡಿಮೆ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಇವೆಲ್ಲವನ್ನೂ ಮತದಾರರು ನೋಡಿದ್ದಾರೆ. ಆದ್ದರಿಂದ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆ ಆಗುವ ವಿಶ್ವಾಸ ಇದೆ ಎಂದು ಹೇಳಿದರು.
ಕಾಫಿ ಬೆಳೆಗಾರರ ಸಮಸ್ಯೆ ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲಾಗಿದೆ. ಅಡಕೆ ನಿಷೇಧ ಗೊಂದಲ 2001ರಲ್ಲಿ ನಿರ್ಮಾಣಗೊಂಡಿದೆ. ಆಗ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳು ಗುಟ್ಕಾದಲ್ಲಿವೆ. ಇವುಗಳಿಂದ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹಾನಿ ಆಗಬಹುದೆಂದು ಆಗಿನ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಇದರಿಂದ ಅಡಕೆ ಬೆಳೆಗಾರರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಕೇಂದ್ರದ ಕಾಂಗ್ರೆಸ್ ಸರ್ಕಾರ ವಿದೇಶದಿಂದ ಬರುತ್ತಿದ್ದ ಅಡಕೆ ಮೇಲೆ ಆಮದು ಸುಂಕ ಹೆಚ್ಚಳ ಮಾಡಿತು. ಆಗ ನಮ್ಮ ದೇಶದ ಅಡಿಕೆಗೆ ಉತ್ತಮ ಬೆಲೆ ಸಿಕ್ಕಿತು ಎಂದು ಹೇಳಿದರು.
ವ್ಯಂಗ್ಯ: ಹಳದಿ ಎಲೆ ರೋಗಪೀಡಿತ ಅಡಿಕೆ ತೋಟಗಳ ಸಂರಕ್ಷಣೆಗಾಗಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಗೋರಕ್ ಸಿಂಗ್ ಸಮಿತಿ ರಚಿಸಿ, ರೋಗಬಾಧಿತ ಪ್ರದೇಶಗಳ ವರದಿ ತರಿಸಿಕೊಂಡಿತು. ಅಡಕೆ ತೋಟಗಳ ಪುನಶ್ಚೇತನಕ್ಕೆ 134 ಕೋಟಿಯನ್ನು ತೋಟಗಾರಿಕೆ ಇಲಾಖೆ ಮೂಲಕ ನೀಡಲಾಗಿದೆ. ಬೆಳೆಗಾರರ ಸಾಲ ಮನ್ನಾಕ್ಕೆ ಸಹಾಯಧನ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಳ್ಳಲಾಗಿದೆ. ಚುನಾವಣೆ ಇರುವುದರಿಂದ ಈ ಕುರಿತು ಯಾವುದೇ ತೀರ್ಮಾನ ಪ್ರಕಟಿಸಲು ಆಗುವುದಿಲ್ಲ. ಗೋರಕ್ ಸಿಂಗ್ ವರದಿ ಅವೈಜ್ಞಾನಿಕ ಎಂದು ಹೇಳುತ್ತಿದ್ದವರು, ಇದೀಗ ಈ ವರದಿ ಇನ್ನೂ ಜಾರಿಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣಾ ಸಂದರ್ಭವಾಗಿದ್ದರಿಂದ ಬಿಜೆಪಿಯವರಿಗೆ ಈ ವರದಿ ವೈಜ್ಞಾನಿಕವಾಗಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಕಾರಣ: ಹಲವು ವರ್ಷಗಳಿಂದ ಅರಣ್ಯ ಸೇರಿದಂತೆ ಇತರೆ ಭೂಮಿ ಒತ್ತುವರಿ ಮಾಡಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಅವರನ್ನು ಅಲ್ಲಿಂದ ಹೊರಹಾಕಲು ಕಾರಣವಾಗಿರುವುದು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಒತ್ತುವರಿ ಕುರಿತು ವರದಿ ನೀಡಲು ಡಾ.ಬಾಲಸುಬ್ರಹ್ಮಣ್ಯನ್ ಸಮಿತಿ ರಚನೆ ಮಾಡಿದ್ದು, ಡಿ.ವಿ.ಸದಾನಂದಗೌಡ ಅವರು ಸಿಎಂ ಆಗಿದ್ದಾಗ ಒತ್ತುವರಿದಾರರಿಗೆ ಜೈಲು ಶಿಕ್ಷೆ ನೀಡುವ ವಿಧೇಯಕವನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತು ಎಂದರು.
ಕಳಸದ ಇನಾಂ ಭೂಮಿಯಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಹೈಕೋರ್ಟ್ಗೆ ಸೇರ್ಪಡೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿನ ಜನರಿಗೆ ದಿಢೀರನೆ ತೆರವುಗೊಳಿಸಿದರೆ ತುಂಬಾ ತೊಂದರೆ ಆಗಬಹುದೆಂಬ ಉದ್ದೇಶದಿಂದ ಅವರಿಗೆ ಪುನರ್ವಸತಿ ಪ್ಯಾಕೇಜ್ ನೀಡಲು ಚಿಂತಿಸಿದೆ. ಇನ್ನೊಂದೆಡೆ ಇನಾಂ ಭೂಮಿ ಹಾಲಿ ಇರುವ ಜನರಿಗೆ ಬಿಟ್ಟುಕೊಟ್ಟು, ಅರಣ್ಯ ಇಲಾಖೆಗೆ ಕುದುರೆಮುಖದಲ್ಲಿ ಅಷ್ಟೇ ಪ್ರಮಾಣದ ಭೂಮಿಯನ್ನು ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಅಡಕೆ ನಿಷೇಧ, ಅರಣ್ಯ ಒತ್ತುವರಿ ತೆರವು. ಈ 2 ಸಮಸ್ಯೆ ಹುಟ್ಟಿಕೊಂಡಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಅವುಗಳ ಪರಿಹಾರಕ್ಕಾಗಿ ಈಗಿನ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

