ಶ್ರೀವತ್ಸ ವ್ಯಕ್ತಿತ್ವ ಅನುಕರಣೀಯ
ಕ.ಪ್ರ.ವಾರ್ತೆ ್ಣ ಬಾಳೆಹೊನ್ನೂರು ್ಣ ಏ. 20
ಸರಳ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹುಲ್ಸೆ ಶ್ರೀವತ್ಸ ಅವರು ಹೆಸರಾಗಿದ್ದರು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನರಸಿಂಹರಾಜಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳು ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳನ್ನು ಸ್ಥಾಪಿಸಿ, ಅದ್ಭುತ ಸಂಘಟನೆಯ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕುಂದೂರಿನಂತಹ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿ ಸಾವಿರಾರು ಸಾಹಿತ್ಯಾಸಕ್ತರು ಸೇರಿ ಸಮ್ಮೇಳನ ಅತ್ಯದ್ಭುತವಾಗಿ ಮೂಡಿಬರುವಲ್ಲಿ ಶ್ರಮಿಸಿದ್ದರು. ಉತ್ತಮ ಸಂಘಟನಾ ಚತುರ, ಮೃದು ಸ್ವಭಾವದವರಾಗಿದ್ದರು ಎಂದರು.
ರೂಪಕ ರಚನೆ: ಹತ್ತುಹಲವು ಹಿರಿಯ ಸಾಹಿತಿಗಳೊಂದಿಗೆ ಒಡನಾಟ ಹೊಂದಿದ್ದ ಶ್ರೀವತ್ಸವ ಅವರು, ಮಿನುಗು ಕವನ ಸಂಕಲನವನ್ನು ಹೊರತಂದಿದ್ದ ಅವರು, ರೂಪಕಗಳ್ನು ರಚಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಕಲಾ ಸಂಘಗಳಿಗೆ ಪ್ರೋತ್ಸಾಹ ನೀಡಿದ್ದರು. ಸ್ಥಳೀಯ ಕಲಾವಿದರನ್ನು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಅವರ ಆದರ್ಶ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ. ಅವರ ಸೇವಾ ಹಿರಿತನ ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದರು.
ನರಸಿಂಹರಾಜಪುರ ತಾಲೂಕು ಚುಸಾಪ ಅಧ್ಯಕ್ಷ ಚೈತನ್ಯ ವೆಂಕಿ, ವಿದ್ಯಾಗಣಪತಿ ಸಮಿತಿ ಕಾರ್ಯದರ್ಶಿ ಹಿರಿಯಣ್ಣ, ಜೇಸಿ ಅಧ್ಯಕ್ಷ ಜಗದೀಶ್, ಹೋಬಳಿ ಕಸಾಪ ಅಧ್ಯಕ್ಷ ರಾ.ವೆಂಕಟೇಶ್, ಲೆಕ್ಕಪರಿಶೋಧಕ ಕೃಷ್ಣಭಟ್, ಶಿಕ್ಷಕ ಸುರೇಂದ್ರ ಮಾಸ್ತರ್, ಬಿಲ್ಲವ ಸಂಘದ ಅಧ್ಯಕ್ಷ ವಿ.ಜಿ.ನಾರಾಯಣ, ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ, ಗ್ರಾ.ಪಂ. ಸದಸ್ಯ ಎಂ.ಎಸ್. ಯಶವಂತ್, ಬಿ.ಆರ್. ನಾಗರಾಜ್ ಗೌಡ, ಸುಧಾಕರ್, ಟಿಂಕರ್ ಅಮ್ಜದ್, ಚೇತನ್ ವಸ್ತ್ರ, ಬಿ.ಎ.ಶ್ರೀನಿವಾಸ್, ರಾಜೇಂದ್ರ, ರಂಗಪ್ಪ, ಕೆ.ಕೆ.ರಮೇಶ್ ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

