ಎನ್ಕೌಂಟರ್ ಮಾಡಿದವರನ್ನು ಬಂಧಿಸಿ
ಕ.ಪ್ರ.ವಾರ್ತೆ ಶೃಂಗೇರಿ ಏ. 21
ತನಿಕೋಡು ಅರಣ್ಯ ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಹೆಸರಿನಲ್ಲಿ ಅಮಾಯಕ ವ್ಯಕ್ತಿಯೊಬ್ಬನ್ನನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಿದ ಎಎನ್ಎಫ್ ಪಡೆಯ ಕೃತ್ಯ ಹಾಗೂ ಪಟ್ಟಣದಲ್ಲಿ ಮೃತ ವ್ಯಕ್ತಿಯ ಕುಟುಂಬದವರು ಶವ ಕೊಂಡೊಯ್ಯವಾಗ ಕೆಲವರು ದಾಂಧಲೆ ನಡೆಸಿ ವಾಹನ ಜಖಂಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಸೋಮವಾರ ಸರ್ವಪಕ್ಷ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಮುಖ್ಯದ್ವಾರದಿಂದ ಹೊರಟ ಪ್ರತಿಭಟನ ಮೆರವಣಿಗೆಯಲ್ಲಿ ಪೊಲೀಸರ, ಸರ್ಕಾರದ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿ, ತಾಲೂಕು ಕಚೇರಿ ಎದುರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಮಲೆನಾಡಿಗೆ ಅಪಾಯಕಾರಿ: ಪ್ರತಿಭಟನಕಾರರನ್ನು ಉದ್ದೇಶಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಎನ್ಂಟರ್ ಕೌಂಟರ್ ಎಂಬುದು ಶಾಂತಿಯುತ ಮಲೆನಾಡಿಗೆ ಅಪಾಯಕಾರಿ ಸಂಸ್ಕೃತಿ. ನಿರಾಯುಧರಾಗಿದ್ದ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಂದಿರುವುದು ಖಂಡನೀಯವಾಗಿದೆ. ತನಿಖೆ ನಡೆಸಲು ತಪಾಸಣಾ ಕೇಂದ್ರದ ಸಿಬ್ಬಂದಿಗಳಿದ್ದರೂ, ಏಕಾಏಕಿ ನಕ್ಸಲ್ ಹೆಸರಿನಲ್ಲಿ ಗುಂಡು ಹಾರಿಸಿ ಜೀವ ಬಲಿತೆಗೆದುಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಸ್ನಿಸಿದರು.
ಸಿಪಿಎಂ ಹಾಸನ ಕ್ಷೇತ್ರದ ಮುಖಂಡ ಧರ್ಮೇಶ್ ಮಾತನಾಡಿದರು. ಬಿಎಸ್ಪಿ ಮುಖಂಡ ಕೆ.ಎಂ. ಗೋಪಾಲ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಸುರೇಂದ್ರ, ತಾಲೂಕು ಅಧ್ಯಕ್ಷ ವಿವೇಕಾನಂದ ಸುಂಕುರ್ಡಿ, ಕಾಂಗ್ರೆಸ್ನ ರಾಜನ್, ಎಂ.ಎಚ್. ನಟರಾಜ್, ಸಿಪಿಐ ಕೆಳವಳಿ ಕಳಸಪ್ಪ, ಜಮಾಲ್ ಬೇಗ್ ಸಾಬ್, ಕೆ.ಎಸ್. ರಮೇಶ್ ಸೇರಿದಂತೆ ಸರ್ವ ಪಕ್ಷಗಳ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

