ಮಾರ್ಕೆಟ್ ರಸ್ತೆ ಕಾಮಗಾರಿಗೆ ಅಧಿಕಾರಿಗಳ ಜಾಣಕುರುಡು
ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯ ಕಾಮಗಾರಿಯಲ್ಲಿ ಹಲವು ಲೋಪದೋಷಗಳು ಕಂಡು ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಜನಜಾಗೃತಿ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಿಲ್ ಆನಂದ್ ಆರೋಪಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವ ಕೆಲಸ ನಡೆಯುತ್ತಿದೆ. ಗುಣಮಟ್ಟದ ಸಿಮೆಂಟ್, ಸರಿಯಾಗಿ ಕ್ಯೂರಿಂಗ್ ಕೆಲಸ ನಡೆಯುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾಮಗಾರಿಯ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಫಲಕವನ್ನು ಹಾಕಬೇಕು. ಅದರಲ್ಲಿ ಗುತ್ತಿಗೆದಾರರ ಭಾವಚಿತ್ರದ ಸಹಿತ ಹೆಸರು, ಅನುಭವ ಸೇರಿದಂತೆ ಇತರೆ ಮಾಹಿತಿಯನ್ನು ಹಾಕಬೇಕು. ಇದರ ಜತೆಗೆ ಕಾಮಗಾರಿಯ ಅಂದಾಜು ವೆಚ್ಚ, ನೀಲ ನಕ್ಷೆಯನ್ನು ಹಾಕಬೇಕು. ಕಾಮಗಾರಿಯನ್ನು ನೋಡಿಕೊಳ್ಳುವ ಎಂಜಿನಿಯರ್ ಒಳಗೊಂಡಂತೆ ಸ್ಥಳೀಯ ನಿವಾಸಿಗರ ಮೇಲ್ವಿಚಾರಕರ ತಂಡವನ್ನು ರಚನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಗಡೀಹಳ್ಳಿ; ತೋಪು ಜಾತ್ರೆಗೆ ಚಾಲನೆ
ತರೀಕೆರೆ: ಅಜ್ಜಂಪುರ ಹೋಬಳಿ ಗಡೀಹಳ್ಳಿಯಲ್ಲಿ ಏರ್ರ್ಪಡಿಸಲಾಗಿರುವ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಕೆರೆಕೋಡಿ ಬೀರಲಿಂಗೇಶ್ವರಸ್ವಾಮಿ, ಮಾದಾಳಯ್ಯ ಬೀರಲಿಂಗೇಶ್ವರಸ್ವಾಮಿ, ಚೆನ್ನಬಸವೇಶ್ವರಸ್ವಾಮಿ ತೋಪು ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀ ಪರಮೇಶ್ವರ ಒಡೆಯರ್, ಶ್ರೀರೇವಣ್ಣ ಒಡೆಯರ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ತೋಪು ಜಾತ್ರೆಗೆ ಚಾಲನೆ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಚೆನ್ನಸಮುದ್ರ ಶ್ರೀಸಿದ್ದರಾಮೇಶ್ವರಸ್ವಾಮಿ ಅವರಿಗೆ ಶ್ರೀಬೀರಲಿಂಗೇಶ್ವರಸ್ವಾಮಿ ಸಮ್ಮುಖ ಎದುರುಗೊಳ್ಳಲಾಯಿತು. ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಬಸವರಾಜಪ್ಪ, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಗಡೀಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

