ಬಾಬಾ ರಾಂದೇವ್ ಬಂಧನಕ್ಕೆ ಆಗ್ರಹ
ಸಾಗರ: ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವ ಯೋಗಗುರು ಬಾಬಾ ರಾಂದೇವ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಪ್ರಮುಖರು ಶನಿವಾರ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ತಾವು ಯೋಗಗುರು ಎಂದು ಹೇಳಿಕೊಳ್ಳುತ್ತಾ ದೇಶದ ಜನರನ್ನು ಮೋಡಿ ಮಾಡುತ್ತಿರುವ ಬಾಬಾ ರಾಮದೇವ್ ದಲಿತ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ರಾಹುಲ್ ಗಾಂಧಿ ದಲಿತರ ಮನೆಗಳಿಗೆ ಹೋಗಿ ಹನಿಮೂನ್ ಮಾಡುತ್ತಿದ್ದಾರೆ ಎಂದು ರಾಮದೇವ್ ಹೇಳಿಕೆ ನೀಡಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಬಾಬಾರಾಮದೇವ್ ಅವರ ಇಂತಹ ಹೇಳಿಕೆ ದಲಿತ ಮಹಿಳೆಯರ ಬಗ್ಗೆ ಅವರು ಹೊಂದಿರುವ ಕೀಳು ಮನೋಭಾವನೆ ತೋರಿಸುತ್ತದೆ. ಬಾಬಾ ರಾಂದೇವ್ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದು, ಅವರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಪ್ರಮುಖರಾದ ಪರಮೇಶ್ವರ ದೂಗೂರು, ಎನ್.ಡಿ. ವಸಂತಕುಮಾರ್, ಕಬಸೆ ಅಶೋಕಮೂರ್ತಿ, ಬಿ.ಸಿ. ಮಹಾಬಲೇಶ್ವರ್, ಜಿ.ಬಿ. ಪುಟ್ಟರಾಜು, ವೆಂಕಟೇಶ್, ದೇವರಾಜ್, ಬಿ. ಇಸ್ಮಾಯಿಲ್, ಯು.ಪಿ. ಜೋಸೆಫ್, ಮಂಜುನಾಥ ಗೌಡ ನಿಸ್ರಾಣಿ ಹಾಜರಿದ್ದರು.
ಬಸವ ಜಯಂತಿ: ಮನವಿ
ಸಾಗರ: ಬಸವ ಜಯಂತಿ ಆಚರಿಸುವಂತೆ ಒತ್ತಾಯಿಸಿ ಇಲ್ಲಿನ ಅಖಿಲ ಕರ್ನಾಟಕ ವೀರಶೈವ ಮಲ್ಲವ ಸಮಾಜದ ವತಿಯಿಂದ ಶನಿವಾರ ಉಪವಿಭಾಗಾಧಿಕಾರಿಗಳ ಮೂಲಕ ಡಿಸಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘಟನೆ ರಾಜ್ಯಾಧ್ಯಕ್ಷ ಕೆ.ಜಿ. ಜಗದೀಶ್ ಒಡೆಯರ್ ಮಾತನಾಡಿ, ಕ್ರಾಂತಿಯೋಗಿ ಬಸವಣ್ಣ ಅವರ ದಿನಾಚರಣೆಯನ್ನು ಕೇವಲ ಫೋಟೋ ಇರಿಸಿ ಪೂಜೆ ಮಾಡಿ, ಭಾವಚಿತ್ರ ಮೆರವಣಿಗೆ ನಡೆಸಿ, ಕಾಯಿ ಒಡೆದ ಮಾತ್ರಕ್ಕೆ ಅರ್ಥಪೂರ್ಣವಾಗುವುದಿಲ್ಲ. ಬದಲಾಗಿ ಬಸವಣ್ಣ ಅವರು ತಮ್ಮ ವಚನ ಹಾಗೂ ಬದುಕಿದ ರೀತಿ ಬಗ್ಗೆ ನಾಡಿಗೆ ನೀಡಿದ ಸಂದೇಶವನ್ನು ಮನೆಮನಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಬಸವಣ್ಣನವರ ಭಾವಚಿತ್ರದ ರಾಜಬೀದಿ ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ ವೈಶಿಷ್ಠ್ಯಪೂರ್ಣವಾಗಿ ನಡೆಯಬೇಕು. ಜನಪದ ಕುಣಿತ, ಬಸವಣ್ಣನವರ ವಿಚಾರಧಾರೆಯನ್ನು ಜನರಿಗೆ ತಲುಪಿಸುವ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿ. ಭೋಜಕುಮಾರ್, ಗಂಗಾಧರ ಗೌಡ, ಬಸವರಾಜ ಗೌಡ, ಲೋಕೇಶ್ ಗೌಡ, ಜಯಶೀಲ ಗೌಡ, ಪುಟ್ಟರಾಜ್, ರಾಜಶೇಖರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

