ಚಿಕ್ಕಮಗಳೂರು

ಯುಜಿಸಿ-ನೆಟ್ ಪರೀಕ್ಷೆ: ತರಬೇತಿ

Published On :

ಚಿಕ್ಕಮಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ನವ ದೆಹಲಿಯ ವಿಶ್ವವಿದ್ಯಾನಿಲಯ ಧನ ಸಹಾಯಕ ಆಯೋಗದವರು ಜೂ. 29ರಂದು ನಡೆಸಲಿರುವ ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ (ಜೆ.ಆರ್.ಎಫ್.) ಹಾಗೂ ಕಾಲೇಜು ಉಪನ್ಯಾಸಕರ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ (ಯುಜಿಸಿ- ನೆಟ್) ಗೆ ಕನ್ನಡ ಮತ್ತು ಇತರ ಆಯ್ದ ವಿಷಯಗಳಿಗಾಗಿ 45 ದಿನಗಳ ಪರೀಕ್ಷಾ ಪೂರ್ವ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಏ.30 ರೊಳಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಸ್ಪರ್ಧಾತ್ಮಕ  ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯನ್ನು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯೊಳಗೆ ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ  ಪ್ರಾದೇಶಿಕ ಕೇಂದ್ರ, ಎಐಟಿ ಕ್ಯಾಂಪಸ್, ಕೆ.ಎಂ.ರಸ್ತೆ, ಚಿಕ್ಕಮಗಳೂರು ಅಥವಾ ದೂರವಾಣಿ ಸಂಖ್ಯೆ 0821-2515944 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.


ಇಂದಿನಿಂದ ಶಂಕರ ಜಯಂತಿ


ತರೀಕೆರೆ: ಪಟ್ಟಣದ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏ.27 ರಿಂದ ಮೇ 4 ರವರೆಗೆ ಶ್ರೀ ಶಂಕರ ಜಯಂತಿಯನ್ನು ಏರ್ಪಡಿಸಲಾಗಿದೆ. ಏ.27 ರಿಂದ  ಶ್ರೀವತ್ಸ ಭಜನಾ ಮಂಡಳಿ ನೇತೃತ್ವದಲ್ಲಿ ಮಾತೆಯರಿಂದ  ಪ್ರತಿದಿನ ಸಂಜೆ 6 ಗಂಟೆಯಿಂದ ಶ್ರೀ ಶಂಕರಾಚಾರ್ಯರ ವಿರಚಿತ ಸೌಂದರ್ಯ ಲಹರಿ ಪಾರಾಯಣ ನಡೆಯಲಿದೆ, ಏ.28 ರಂದು ಮಾತಾ ಗಾಯಿತ್ರಿ ಪ್ರತಿಷ್‌ಠಾನದ ಅಧ್ಯಕ್ಷರಾದ ಕೆ.ಟಿ.ಲಕ್ಷ್ಮೀನಾರಾಯಣ ಭಟ್ಟರು, ಏ.29 ರಂದು ಉಪನ್ಯಾಸಕ ಕೆ.ವಿ.ಚಂದ್ರಮೌಳಿ, ಎಚ್.ಎಸ್.ಶಾರದಾ ಎನ್.ಮಂಜುನಾಥ್ ಅವರಿಂದ ಶ್ರೀ ಶಂಕರ ವಿಜಯ ಗಮಕ ವಾಚನ ಮತ್ತು ವ್ಯಾಖ್ಯಾನ, ಏ.30 ರಂದು ಬೆಂಗಳೂರು ಎಂ.ಇ.ಎಸ್.ಕಾಲೇಜು  ನಿವೃತ್ತ ಪ್ರಾಚಾರ್ಯ ಡಾ.ಬಿ.ಎಸ್.ರಾಮಕೃಷ್ಣ ಅವರಿಂದ ಶ್ರೀ ಗುರು ತತ್ವ ಕುರಿತು ಉಪನ್ಯಾಸ, ಮೇ,1 ರಂದು ಅಂಬಳೆ ಶ್ರೀ ವಿದ್ವತ್ ಶ್ರೀಕಂಠ ಭಟ್ ಅವರಿಂದ ಉಪನ್ಯಾಸ, 2 ರಂದು ವಿದ್ವಾನ್ ದಿಲೀಪ್ ಬೆಳ್ಳಾವೆ ಉಪನ್ಯಾಸ, 3ರಂದು ಉಪನ್ಯಾಸ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.