ಚಿಕ್ಕಮಗಳೂರು

ವೇದಾಧ್ಯಯನದಿಂದ ವಿಚಾರ ಶುದ್ಧಿ

Published On :

ಶಂಕರ ಜಯಂತಿ ಉದ್ಘಾಟಿಸಿದ  ಡಾ.ಎ.ಎಸ್.ಶಂಕರನಾರಾಯಣ್


ತರೀಕೆರೆ: ವೇದಗಳು ಅನಂತವಾದ ವಾಙ್ಮಯ ರಾಶಿಯಾಗಿದೆ ಎಂದು ಭದ್ರಾವತಿ ಆಕಾಶವಾಣಿ ನಿಲಯ ಮುಖ್ಯ ಕಾರ್ಯನಿರ್ವಾಹಕ ಡಾ. ಎ.ಎಸ್.ಶಂಕರನಾರಾಯಣ್ ಹೇಳಿದರು.
ಅವರು, ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ದೇವಾಲಯ ಆವರಣದಲ್ಲಿ ಶಂಕರ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿಚಾರ ಶುದ್ಧಿ: ವೇದಗಳನ್ನು ಅರ್ಥ ಮಾಡಿಕೊಂಡರೆ ಆಚಾರ, ವಿಚಾರ ತನಗೆ ತಾನಾಗಿಯೇ ಶುದ್ಧಗೊಳ್ಳುತ್ತವೆ. ವೇದಾಧ್ಯಯನ ಒಂದು ಕರ್ತವ್ಯವಾಗಿದೆ. ಭಗವಂತ ಭಾವಗ್ರಾಹಿ, ಗೀತ ಸಂಗೀತ ಕೂಡ ಮೋಕ್ಷ ಸಾಧನೆಯ ಗುರಿಯಾಗಿದೆ ಎಂದು ತಿಳಿಸಿದ ಅವರು, ಸಮಾಜದ ಉದ್ಧಾರಕ್ಕಾಗಿಯೇ ಶಂಕರಾಚಾರ್ಯರು ಪ್ರಯತ್ನಿಸಿದರು ಎಂಸಿದರು.
ಸ.ಜೂ. ಕಾಲೇಜು ನಿವೃತ್ತ ಉಪನ್ಯಾಸಕ ಬಿ.ಎಚ್. ಕುಮಾರಸ್ವಾಮಿ ಮಾತನಾಡಿ, ಶಂಕರರು ತತ್ವಶಾಸ್ತ್ರದಲ್ಲಿ ಮಹಾನ್ ದಾರ್ಶನಿಕರಾಗಿದ್ದರು. ಶಂಕರರ ಶಿಷ್ಯರ ಗುರುಭಕ್ತಿ ಒಂದು ಮೇರು ಪರ್ವತವೇ ಸರಿ, ಶಂಕರರು ತಮ್ಮ ಐದನೇ ವಯಸ್ಸಿನಲ್ಲೇ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದ್ದರು ಎಂದು ತಿಳಿಸಿದ ಅವರು, ಸರ್ಕಾರ ಶಂಕರ ಜಯಂತಿ ದಿನವನ್ನು ವಿಶ್ವ ದಾರ್ಶನಿಕರ ದಿನ ಎಂದು ಘೋಷಿಸಬೇಕು ಎಂದು ತಿಳಿಸಿದರು.
ಕರ್ತವ್ಯ ಪಾಲನೆ; ಶಿವಮೊಗ್ಗ ದೂರ್ವಾಸ ಕ್ಷೇತ್ರದ ಜಾತವೇದ ಸುಕ್ಷೇಮಾಲಯದ ಪಲ್ಲಕ್ಕಿ ನಾರಾಯಣ ಶ್ರೀ ಮಾತನಾಡಿ ಶ್ರದ್ದೆಯಿಂದ ಕರ್ತವ್ಯ ಮಾಡಬೇಕು, ಪೋಷಕರು ಮಕ್ಕಳಿಗೆ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಶಂಕರ ವಿಜಯ ಪಾರಾಯಣ, ನರಸಿಂಹ ಸ್ತೋತ್ರ ಇತ್ಯಾದಿಗಳನ್ನು ಹೇಳಿಕೊಡುವುದರ ಮೂಲಕ ಮಾನಸಿಕವಾಗಿ ಶ್ರದ್ದೆ, ಏಕಾಗ್ರತೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀವತ್ಸ ಭಜನಾ ಮಂಡಳಿ ಮಾತೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಪಾರಾಯಣ  ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.