ಶಂಕರ ಜಯಂತಿ ಮಹೋತ್ಸವ ನಾಳೆಯಿಂದ
ಶೃಂಗೇರಿ: ಇಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಪೀಠದಲ್ಲಿ ಏಪ್ರಿಲ್ 30 ರಿಂದ ಮೇ 5 ರವರೆಗೆ ಶ್ರೀ ಶಂಕರ ಜಯಂತಿ ಮಹೋತ್ಸವ ನಡೆಯಲಿದೆ.ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಶಂಕರ ಭಗವತ್ಪಾಧರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಚತುರ್ವೇದ-ಪ್ರಸ್ಥಾನ ತ್ರಯ ಭಾಷ್ಯ-ಶ್ರೀ ಶಂಕರ ದಿಗ್ವಿಜಯ ಮೊದಲಾದ ಪಾರಾಯಣಗಳು, ಮಹಾಮಂಗಳಾರತಿ ನೆರವೇರಲಿದೆ.
ಜಗದ್ಗುರು ಶ್ರೀ ಭಾರತೀ ತೀರ್ಥರ ಅಧ್ಯಕ್ಷತೆಯಲ್ಲಿ ಸಭೆ,ವೇದ ಸ್ವಸ್ತಿವಾಚನ,ವಿದ್ವಾಂಸರಿಂದ ಉಪನ್ಯಾಸ,ಭಗವತ್ಪಾದರ ಮೂರ್ತಿಗೆ ಮಹಾಮಂಗಳಾರತಿ,ಅಷ್ಟಾವಧಾನ ಸೇವೆ ನಡೆಯಲಿದೆ. ಮೇ 4 ರಂದು ಶ್ರೀ ಶಂಕರ ಜಯಂತಿ ಅಂಗವಾಗಿ ಮದ್ಯಾಹ್ನ ಶ್ರೀ ಭಾರತೀ ತೀರ್ಥರಿಂದ ಶ್ರೀ ಶಂಕರಭಗವತ್ಪಾದಾಚಾರ್ಯರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಕನಕಾಭಿಷೇಕ, ಸಂಜೆ ಶ್ರೀ ಗಳವರ ಅದ್ಯಕ್ಷತೆಯಲ್ಲಿ ಸಭೆ,ವೇದ ಸ್ವಸ್ತಿವಾಚನ,ಅನುಗ್ರಹ ಭಾಷಣ, ಭಗವತ್ಪಾದಾರ್ಚರ ಮೂರ್ತಿಗೆ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯಲಿದೆ. ಮೇ 5 ರಂದು ಜಗದ್ಗುರು ಶ್ರೀ ಗಳವರ ದಿವ್ಯ ಸಾನಿದ್ಯದಲ್ಲಿ ಶ್ರೀ ಶಂಕರ ಮಹಾರಥೋತ್ಸವ ನಡೆಯಲಿದೆ. ಸಂಜೆ ಶ್ರೀ ಗಳವರ ಅಧ್ಯಕ್ಷತೆಯಲ್ಲಿ ಸಭೆ,ಅನುಗ್ರಹ ಭಾಷಣ,ಶಂಕರಭಗವತ್ಪಾದಾಚಾರ್ಯರ ಮೂರ್ತಿಗೆ ಮಹಾಮಂಗಳಾರತಿ, ಅಷ್ಠಾವಧಾನ ಸೇವೆ, ವೇದಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ವಿದ್ವತ್ಸಮ್ಮಾನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

