'ಮಹಿಳೆ, ಮಕ್ಕಳನ್ನು ರಕ್ಷಿಸಿ'
ಮೂಡಿಗೆರೆ: ಇತ್ತೀಚಿನ ದಿನಗಳಲ್ಲಿ ಮಾನವ ಸಾಗಣೆ ಬಲವಾಗಿ ಮತ್ತು ಮಿತಿಮೀರಿದ ರೀತಿಯಲ್ಲಿ ನಡೆಯುತ್ತಿದೆ. ಈ ಪಿಡುಗು ಅಪ್ರಾಪ್ತ ವಯಸ್ಕರು, ಕಾರ್ಮಿಕ ವರ್ಗ, ಮಹಿಳೆಯರು, ಯುವ ಜನರು ಹಾಗೂ ಮಕ್ಕಳನ್ನು ಸಮಸ್ಯೆಗೆ ತಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಡಾ.ಮೋಟಮ್ಮ ಹೇಳಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ಕಾನೂನು ಸೇವಾ ಸಹಯೋಗದಲ್ಲಿ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ, ಮಾರಾಟ ತಡೆಗಟ್ಟಲು ತಾಲೂಕುಮಟ್ಟದ ಬೃಹತ್ ಆಂದೋಲನ ಕಾರ್ಯಕ್ರಮ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಅವಲಂಬನೆ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ. ಅನಕ್ಷರತೆ, ಬಡತನ, ಮೂಢನಂಬಿಕೆ, ಅಜ್ಞಾನ, ಐಶಾರಾಮಿ ವಸ್ತುಗಳ ಆಕರ್ಷಣೆ, ಸಾಮಾಜಿಕ ಮೌಲ್ಯಗಳ ಕುಸಿತ, ದೇವದಾಸಿ ಪದ್ಧತಿ ಸೇರಿದಂತೆ ಸಾಮಾ ಜಿಕ ಸಂಪ್ರದಾಯಗಳು, ಹೆಚ್ಚು ಹಣ ಬರುವ ಕೆಲಸದ ಆಕರ್ಷಣೆ, ಮಕ್ಕಳು ಅವಲಂಬಿತರು ತಮಗೆ ಅಗತ್ಯ ಹಾಗೂ ಉಳಿವಿಕೆಗೆ ಹಿರಿಯರನ್ನು ಅವಲಂಬಿಸಿರುವುದರಿಂದ ದುರ್ಬಲರಾಗಿದ್ದಾರೆ ಎಂದರು.
ತಾಪಂ ಅಧ್ಯಕ್ಷಶೇಷಗಿರಿ, ಜಿಪಂ ಸದಸ್ಯ ಅನಂತು, ತಾಪಂ ಸದಸ್ಯರಾದ ರಂಜನ್ ಅಜಿತ್ಕುಮಾರ್, ಎ.ಜೆ. ಸುಬ್ರಾಯ, ಸುಧಾ, ಸಮಾಜ ಸೇವಕಿ ಮೋಹಿನಿ ಸಿದ್ದೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಜೆ. ಚಂದ್ರಶೇಖರಯ್ಯ, ಠಾಣಾಧಿಖಾರಿ ಅನಂತ ಪದ್ಮನಾಬ್, ಕೃಷ್ಣಪ್ಪ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮಾರಾಟ ತಡೆ ಕುರಿತು ವಕೀಲರಾದ ಜಯರಾಜ್, ಅಶೋಕ್, ವಿಶಾಲಾಕ್ಷಿ, ಎನ್.ಆರ್.ಪುರ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸುದರ್ಶನ್ ಉಪನ್ಯಾಸವನ್ನು ನೀಡಿದರು. ಮಕ್ಕಳ ಅನೈತಿಕ ಸಾಗಣೆ ಮತ್ತು ಮಾರಾಟವನ್ನು ತಡೆಯುವಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗನವಾಡಿ ಕಾರ್ಯಕಕರ್ತರು ಜಾಥಾ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

