ಮುಸ್ಲಿಂ ಬಾಂಧವರೇ ಮೋದಿಯನ್ನು ನಿಂದಿಸಬೇಡಿ
ಅಮೀನಗಡ: ಮುಸ್ಲಿಂ ಬಾಂಧವರೇ.. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸಬೇಡಿ. ಅವರವರ ಅದೃಷ್ಟ ಅವರಿಗೆ. ಹೀಗಾಗಿ ಮೋದಿಯವರನ್ನು ಟೀಕಿಸುವ, ನಿಂದಿಸುವ ಕೆಲಸ ಮಾಡಬೇಡಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಕರೆ ನೀಡಿದ್ದಾರೆ. ಸಮೀಪದ ಗುಡೂರು(ಎಸ್.ಸಿ.) ಗ್ರಾಮದಲ್ಲಿ ಇಸ್ಲಾಮಿಯಾ ತಂಜೀಮ್ ಕಮಿಟಿ ಹಾಗೂ ಸೀರತ್ ಕಮಿಟಿ ಗುಡೂರು ಘಟಕ ಏರ್ಪಡಿಸಿದ್ದ ಶಾದಿಮಹಲ್ ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ನನ್ನದು ಯಾವಾಗಲೂ ಒಂದೇ ಮಾತು. ಮುಖ್ಯಮಂತ್ರಿಯೇ ಆಗಲಿ, ಹೈಕಮಾಂಡೇ ಇರಲಿ. ನಾನು ಹೆದರುವುದು ದೇವರಿಗೆ ಮಾತ್ರ. ಹಿಂದೂ ಧರ್ಮದವರನ್ನು ಪ್ರೇಮದಿಂದ ಕಾಣಿರಿ. ಸರ್ವಸಮಾನತೆಯಿರಲಿ. ಮಾನವೀಯತೆಯಿಂದ ಬದುಕುವುದೇ ಧರ್ಮ. ಹಿಂದೂ, ಮುಸ್ಲಿಮರು ಈ ದೇಶದಲ್ಲಿ ಅಣ್ಣ-ತಮ್ಮಂದಿರಂತೆ ಬಾಳಬೇಕು. ನಾನು ವ್ಯಕ್ತಿಗತವಾಗಿ ಬೆಳೆಯಬೇಕಾದ ಅವಶ್ಯಕತೆ ಇಲ್ಲ. ನನ್ನ ಸೇವೆ ಸಮಾಜಕ್ಕಾಗಿ ಎಂದರು. ರಾಜಕಾರಣದಲ್ಲಿ ಮುಸಲ್ಮಾನರಿಗೂ ಉನ್ನತ ಹುದ್ದೆಯ ಆಕಾಂಕ್ಷೆ ಇದೆ. ಟಿಪ್ಪು ಸುಲ್ತಾನನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಮುಸ್ಲಿಂ ಸಮಾಜದವರಿಗೆ ರಾಜ್ಯದಲ್ಲಿ ಉನ್ನತ ಹುದ್ದೆಯ ಅವಕಾಶ ಸಿಗಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮೂಲಕ ರಾಣಿ ಚೆನ್ನಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಅವಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ರಾಷ್ಟ್ರಕ್ಕಾಗಿ ಹುತಾತ್ಮನಾದ. ಅವರ ಸಮಾಜದವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದ ಚೆನ್ನಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

