ಚಿಕ್ಕಮಗಳೂರು

ಇನಾಂ: ಹೋರಾಟಕ್ಕೆ ಕಪ್ಪು ಚುಕ್ಕೆಯಾದ ಹೊಡೆದಾಟ

Published On :

ಮೂಡಿಗೆರೆ: ಕಳಸ ಇನಾಂ ಸಮಸ್ಯೆಯನ್ನು ಬಗೆ ಹರಿಸದೆ ಕಚ್ಚಾಟದಲ್ಲಿ ತೊಡಗಿರುವುದು ಬೇಸರದ ಸಂಗತಿ. ಇನಾಂ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳು ವಿನಾಕಾರಣ ಜಗಳ ತೆಗೆದು ಹೊಡೆದಾಟ ಮಾಡಿಕೊಂಡು ಹೋರಾಟಕ್ಕೆ ಒಂದು ಕಪ್ಪು ಚುಕ್ಕಿಯನ್ನು ತಂದಿದ್ದಾರೆ ಎಂದು ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಸೀತಾ ತಿಳಿಸಿದರು.
ಹೊರನಾಡು- ಬಲಿಗೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಥ ಸಂದರ್ಭವನ್ನು ಬಳಸಿಕೊಂಡು ವೇದಿಕೆಯನ್ನಾಗಿಸುತ್ತಿದ್ದಾರೆ. ರಾಜಕಾಣೀಗಳು ಇನಾಂ ಭೂಮಿ ಸಮಸ್ಯೆಯನ್ನು ಈ ಹಿಂದೆಯೇ ಬಗೆಹರಿಸಬಹುದಾಗಿತ್ತು. ತಮ್ಮ ಸ್ವಾರ್ಥ್ಯ ರಾಜಕಾರಣಕ್ಕಾಗಿ ಸಮಸ್ಯೆಯನ್ನು ಬಗೆಹರಿಸದೇ ಇರುವುದೇ ಇಂದು ಇನಾಂ ಭೂಮಿ ತೆರವು ಎಂಬ ಭೂತಕ್ಕೆ ಗ್ರಾಮಸ್ಥರು ಆತಂಕಕ್ಕಿಡಾಗಿದ್ದಾರೆ. ನಮ್ಮ ನೆಲ ನಮ್ಮ ಭೂಮಿ ಉಳಿಸಿಕೊಳ್ಳುವ ಸಲುವಾಗಿ ಪ್ರಗತಿಪರ ಮಹಿಳಾ ಸಂಘಟನೆ ಹೋರಾಟ ನಡೆಸುತ್ತಿದೆ. ಆದರೆ, ರಾಜಕಾರಣಿಗಳ ಮಧ್ಯಪ್ರವೇಶದಿಂದ ಹೋರಾಟದಿಂದ ದೂರ ಉಳಿಯುವಂತ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ ಕಳಸ ಹೋಬಳಿಯ ಇನಾಂ ಮೀಸಲು ಅರಣ್ಯ ವಿರೋಧಿ ಹೋರಾಟ ಸಂತ್ರಸ್ಥರು, ಗ್ರಾಮಸ್ಥರೊಂದಿಗೆ ತಮ್ಮ ಸಂಘದ ಸದಸ್ಯರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿಸಲ್ಲಿಸುವುದಾಗಿ ತಿಳಿಸಿದರು. ಇನಾಂ ಭೂಮಿ ವಾಸಿಗಳು ಮುಂದಿನ ಲೋಕಸಭಾ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.